ಸಿಂಡಿಕೇಟ್, ಕಾರ್ಪೊರೇಷನ್ ಸೇರಿದಂತೆ ಆರು ಬ್ಯಾಂಕುಗಳು ಆರ್‌ಬಿಐ ಕಾಯ್ದೆಯ 2ನೇ ಅನುಸೂಚಿಯಿಂದ ಹೊರಕ್ಕೆ

Update: 2020-10-02 16:40 GMT

ಹೊಸದಿಲ್ಲಿ,ಅ.2: ಇತರ ಬ್ಯಾಂಕುಗಳೊಂದಿಗೆ ವಿಲೀನದ ಹಿನ್ನೆಲೆಯಲ್ಲಿ ಸಾರ್ವಜನಿಕ ಕ್ಷೇತ್ರದ ಸಿಂಡಿಕೇಟ್ ಬ್ಯಾಂಕ್,ಕಾರ್ಪೊರೇಷನ್ ಬ್ಯಾಂಕ್,ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ),ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ,ಆಂಧ್ರ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್‌ಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆರ್‌ಬಿಐ ಕಾಯ್ದೆಯ ಎರಡನೇ ಅನುಸೂಚಿಯಿಂದ ಹೊರಗಿರಿಸಿದೆ.

 ಆರ್‌ಬಿಐ ಕಾಯ್ದೆಯ ಎರಡನೇ ಅನುಸೂಚಿಯಲ್ಲಿ ಉಲ್ಲೇಖಿಸಿರುವ ಬ್ಯಾಂಕುಗಳನ್ನು ‘ಅನುಸೂಚಿತ ವಾಣಿಜ್ಯ ಬ್ಯಾಂಕ್’ಗಳೆಂದು ಕರೆಯಲಾಗುತ್ತದೆ. ಈ ಆರು ಬ್ಯಾಂಕುಗಳು ಎ.1ರಂದು ಇತರ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳೊಂದಿಗೆ ವಿಲೀನಗೊಂಡಿದ್ದವು. ಒಬಿಸಿ ಮತ್ತು ಯನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಇವು ಪಿಎನ್‌ಬಿಯಲ್ಲಿ,ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್‌ನಲ್ಲಿ,ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್‌ಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಾಗೂ ಅಲಹಾಬಾದ್ ಬ್ಯಾಂಕ್ ಇಂಡಿಯನ್ ಬ್ಯಾಂಕ್‌ನಲ್ಲಿ ವಿಲೀನಗೊಂಡಿದ್ದವು.

2017ರಲ್ಲಿ ದೇಶದಲ್ಲಿ 27 ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿದ್ದು,ಅವುಗಳ ಒಟ್ಟು ಸಂಖ್ಯೆ ಈಗ 12ಕ್ಕಿಳಿದಿದೆ. ಈ ಪೈಕಿ ಏಳು ದೊಡ್ಡ ಬ್ಯಾಂಕ್‌ಗಳಾಗಿದ್ದರೆ ಐದು ಸಣ್ಣ ಬ್ಯಾಂಕುಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News