ಎಸ್ಕೆಎಸ್ಸೆಸ್ಸೆಫ್ ವಿಖಾಯ ವತಿಯಿಂದ ರಕ್ತದಾನ ಅಭಿಯಾನದ ಸಮಾರೋಪ ಸಮಾರಂಭ
ಮಂಗಳೂರು : ಎಸ್ಕೆಎಸ್ಸೆಸ್ಸೆಫ್ ವಿಖಾಯ ರಕ್ತದಾನಿ ಬಳಗದ ವತಿಯಿಂದ ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ರಕ್ತದಾನ ಶಿಬಿರ ಅಭಿಯಾನದ ಸಮಾರೋಪ ಸಮಾರಂಭ ಅ. 2ರಂದು ಮಂಗಳೂರಿನ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು.
ಬೆಳಗ್ಗೆ 9 ಗಂಟೆಗೆ ಪ್ಲಾಸ್ಮಾ ಹಾಗೂ ರಕ್ತದಾನಿಗಳ ಸಂಗಮ ನಡೆಯಿತು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಹಾಗೂ ಯನೆಪೊಯ ಬ್ಲಡ್ ಬ್ಯಾಂಕ್ ಸಹಬಾಗಿತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು. ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ವಿಖಾಯ ಚಯರ್ಮ್ಯಾನ್ ಅಬ್ದುಲ್ ಖಾದರ್ ಮುಸ್ಲಿಯಾರ್ ದುಃವಾ ನೆರೆವೇರಿಸಿ ರಕ್ತದಾನಕ್ಕೆ ಚಾಲನೆ ನೀಡಿದರು. ಮಧ್ಯಾಹ್ನ ರಕ್ತದಾನ ಅಭಿಯಾನದ ಸಮಾರೋಪ ಸಮಾರಂಭ ನಡೆಯಿತು .ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಅಧ್ಯಕ್ಷರೂ, ಶೈಖುನಾ ಮಿತ್ತಬೈಲು ಉಸ್ತಾದ್ ಪುತ್ರ ಇರ್ಷಾದ್ ದಾರಿಮಿ ಅಲ್ ಜಝ್ಹರಿ ಕಾರ್ಯಕ್ರಮವನ್ನು ದುಃವಾ ನೆರೆವೇರಿಸಿ, ಉಧ್ಘಾಟಿಸಿದರು.
ಎಸ್ಕೆಎಸ್ಸೆಸ್ಸೆಫ್ ವಿಖಾಯ ಜಿಲ್ಲಾ ಚಯರ್ಮ್ಯಾನ್ ಸಯ್ಯಿದ್ ಇಸ್ಮಾಯಿಲ್ ತಂಙಳ್ ರವರ ಅಧ್ಯಕ್ಷತೆ ವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರೀಫ್ ಕಮ್ಮಾಜೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಮಂಗಳೂರು ಕ್ಷೇತ್ರದ ಶಾಸಕ ಯು.ಟಿ ಖಾದರ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮುಹಮ್ಮದ್ ಮೋನು, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಅಧ್ಯಕ್ಷ ಮೌಲನಾ ಅನೀಸ್ ಕೌಸರಿ ಮುಖ್ಯ ಪ್ರಭಾಷಣ ಮಾಡಿದರು.
ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಖಾಸಿಂ ದಾರಿಮಿ ಸವಣೂರು, ಕೈಕಂಬ ವಲಯಧ್ಯಕ್ಷರಾದ ಜಮಾಲುದ್ದೀನ್ ದಾರಿಮಿ ಪ್ರಸ್ತಾವಿಕ ಮಾತುಗಳನ್ನಾಡಿದರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ,ಕೋಶಾಧಿಕಾರಿ ಹನೀಫ್ ದೂಮಲಿಕೆ, ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ವಿಖಾಯ ಜನರಲ್ ಕನ್ವೀನರ್ ಆಸಿಫ್ ಕಬಕ ,ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ ಜಿಲ್ಲಾ ಕೋ ಆರ್ಡಿನೇಟರ್ ಮುಸ್ತಫ ಕಟ್ಟದಪಡ್ಪು ವಿಖಾಯ ರಕ್ತದಾನಿ ಬಳಗದ ಜಿಲ್ಲಾ ಉಸ್ತುವಾರಿ ತಾಜುದ್ದೀನ್ ಟರ್ಲಿ, ಮಂಗಳೂರು ವಲಯಧ್ಯಕ್ಷರಾದ ಅಬ್ದುಲ್ ಖಾದರ್ ಕಣ್ಣೂರು, ಪ್ರಧಾನ ಕಾರ್ಯದರ್ಶಿ ಇರ್ಫಾನ್ ಕಣ್ಣೂರು, ವಿಖಾಯ ಚಯರ್ಮ್ಯಾನ್ ಅಪ್ಸರ್ ಬಾಷ,ವಲಯ ರಕ್ತದಾನಿ ಬಳಗ ಉಸ್ತುವಾರಿ ನಝೀರ್ ವಲಚ್ಚಿಲ್, ವಲಯ ಕೋಶಾಧಿಕಾರಿ ಆರಿಸ್ ಕುದ್ರೋಳಿ , ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕೋ ಆರ್ಡಿನೇಟರ್ ಪ್ರವೀಣ್ ಕುಮಾರ್, ಸಾಹುಲ್ ಹಮೀದ್ ಕೆ.ಕೆ ,ಸಲಿಂ ಹಂಡೇಲು,ಯು ಎಚ್ ಅಬೂಬಕ್ಕರ್ ಹಾಜಿ , ಸಂಶುದ್ದೀನ್ ಎಚ್ ಬಿ ಟಿ ,ಹಾಜಿ ಎಲ್ ಟಿ ಅಬ್ದುಲ್ ರಝಾಕ್, ನೌಶಾದ್ ಹಾಜಿ ಸೂರಲ್ಪಾಡಿ, ಅಬ್ದುಲ್ ಸಲಾಂ ಬೂಟ್ ಬಝಾರ್, ಲಿಯಾಖತ್ ಅಲಿ, ಬದ್ರುದ್ದೀನ್ ಮರಕ್ಕಿಣಿ, ಸಮೀರ್ ಎಚ್ ಕಲ್ಲು, ಶಾಕಿರ್ ಮಿತ್ತಬೈಲು ,ಇಬ್ರಾಹಿಂ ಕಡವ , ಮುಸ್ತಫ ಸೈಟ್, ನೌಶಾದ್ ದೇರಳಕಟ್ಟೆ ,ಶರೀಫ್ ಅಜ್ಜಾವರ, ಅಬ್ದುಲ್ ರಝಾಕ್, ಅಬ್ದುಲ್ ಖಾದರ್ ಬಂಗೇರ್ ಕಟ್ಟೆ, ಸಿದ್ದೀಕ್ ನೀರಾಜೆ, ಅಬ್ದುಲ್ ರಝಾಕ್ ರಾವತಾರ್ ಹಂಝ ಕುರಿಯಪ್ಪಾಡಿ, ಅಕ್ಬರ್ ಮೂಡಬಿದಿರೆ, ಇಬ್ರಾಹಿಂ ಕುಕ್ಕಟ್ಟೆ, ಜಾಬಿರ್ ಪೈಝಿ ಬನಾರಿ ಮುಂತಾದವರು ಉಪಸ್ಥಿತರಿದ್ದರು.
ಅಮ್ನಾಝ್ ಮಲಿಕ್ ಕಾರ್ಯಕ್ರಮ ನಿರೂಪಿಸಿದರು. ಎಸ್ಕೆಎಸ್ಸೆಸ್ಸೆಫ್ ವಿಖಾಯ ಕೇಂದ್ರ ಸಮಿತಿ ವೈಸ್ ಚಯರ್ಮ್ಯಾನ್ ಬಶೀರ್ ಮಜಲು ವಂದಿಸಿದರು