×
Ad

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸ್ಪರ್ಧೆ: ಕಾವ್ಯಾ ಹಂದೆ ಪ್ರಥಮ

Update: 2020-10-03 19:29 IST

ಉಡುಪಿ, ಅ.3: ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂವಿಪ್ರ ಸಂಭ್ರಮ -2020ದ ಅಂಗವಾಗಿ ಆಯೋಜಿಸಿದ್ದ ಕಥಾ ಸಪ್ತಾಹದ ಕೊನೆ ಯಲ್ಲಿ ನಡೆಸಿದ ಕಾಲೇಜು ವಿದ್ಯಾರ್ಥಿಗಳಿಗೆ ‘ಕಥೆ ಕೇಳಿ- ಅನಿಸಿಕೆ ಕಳುಹಿಸಿ’ ಸ್ಪರ್ಧೆಯಲ್ಲಿ ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ಕಾವ್ಯಾ ಹಂದೆ ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ.

ದ್ವಿತೀಯ ಬಹುಮಾನವನ್ನು ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ಕೀರ್ತಿ ಎಸ್., ತೃತೀಯ ಬಹುಮಾನವನ್ನು ಕುಮಟಾದ ಕಮಲಾ ಬಾಳಿಗಾ ಕಾಲೇಜಿನ ಸಂಗೀತ ಎನ್.ಶೆಟ್ಟಿ ಹಾಗೂ ಚತುರ್ಥ ಬಹುಮಾನವನ್ನು ಮಂಡ್ಯ ಪಿಇಎಸ್ ಪದವಿ ಕಾಲೇಜಿನ ದೀಕ್ಷಿತ್ ಕುಮಾರ್ ಗೆದ್ದುಕೊಂಡಿದ್ದಾರೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ಚಿನ್ಮಯ ಅಡಿಗ ಉಡುಪಿ, ಗಾನವಿ ಜಿ. ಉಡುಪಿ, ನಿಶ್ಮಿತಾ ಪೂಜಾರಿ ಶಿರ್ವ ಹಾಗೂ ಕವಿತಾ ಎಮ್ ಅಂಗಡಿ ಹಾವೇರಿ ಇವರು ತೀರ್ಪುಗಾರರ ಮೆಚ್ಚುಗೆ ಬಹುಮಾನವನ್ನು ಪಡೆದಿದ್ದಾರೆ. ತೀರ್ಪುಗಾರರಾಗಿ ಡಾ.ರಶ್ಮಿ ಕುಂದಾಪುರ ಮತ್ತು ಡಾ. ಪ್ರಜ್ಞಾ ಮಾರ್ಪಳ್ಳಿ ಸಹಕರಿಸಿದ್ದಾರೆ ಎಂದು ಸಪ್ತಾಹದ ಸಂಯೊೀಜಕಿ ಪೂರ್ಣಿಮಾ ಜನಾರ್ದನ್ ತಿಳಿಸಿದ್ದಾರೆ.

ಚಿನ್ಮಯ ಅಡಿಗ ಉಡುಪಿ, ಗಾನವಿ ಜಿ. ಉಡುಪಿ, ನಿಶ್ಮಿತಾ ಪೂಜಾರಿ ಶಿರ್ವ ಹಾಗೂ ಕವಿತಾ ಎಮ್ ಅಂಗಡಿ ಹಾವೇರಿ ಇವರು ತೀರ್ಪುಗಾರರ ಮೆಚ್ಚುಗೆ ಬಹುಮಾನವನ್ನು ಪಡೆದಿದ್ದಾರೆ. ತೀರ್ಪುಗಾರರಾಗಿ ಡಾ.ರಶ್ಮಿ ಕುಂದಾಪುರ ಮತ್ತು ಡಾ. ಪ್ರಜ್ಞಾ ಮಾರ್ಪಳ್ಳಿ ಸಹಕರಿಸಿದ್ದಾರೆ ಎಂದು ಸಪ್ತಾಹದ ಸಂಯೋಜಕಿ ಪೂರ್ಣಿಮಾ ಜನಾರ್ದನ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News