ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದ ರಾಹುಲ್, ಪ್ರಿಯಾಂಕಾ ಗಾಂಧಿ
Update: 2020-10-03 20:06 IST
ಹೊಸದಿಲ್ಲಿ, ಅ.3: ಕಳೆದ ತಿಂಗಳು ಅತ್ಯಾಚಾರ ಹಾಗೂ ಚಿತ್ರಹಿಂಸೆಗೆ ಒಳಗಾಗಿ ಮಂಗಳವಾರ ಮೃತಪಟ್ಟಿರುವ 20ರ ಹರೆಯದ ದಲಿತ ಯುವತಿಯ ಕುಟುಂಬ ಸದಸ್ಯರನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಎರಡನೇ ಬಾರಿ ಉತ್ತರಪ್ರದೇಶದ ಹತ್ರಸ್‌ಗೆ ತೆರಳುವ ಯತ್ನದಲ್ಲಿದ್ದಾಗ ದಿಲ್ಲಿ-ಉತ್ತರಪ್ರದೇಶ ಗಡಿಯಲ್ಲಿ ಪೊಲೀಸರು ಅವರ ವಾಹನವನ್ನು ತಡೆದಾಗ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಗುರುವಾರ ಕೂಡ ರಾಹುಲ್ ಹಾಗೂ ಪ್ರಿಯಾಂಕಾರನ್ನು ಹತ್ರಸ್‌ಗೆ ತೆರಳಲು ಉತ್ತರ ಪ್ರದೇಶ ಪೊಲೀಸರು ಬಿಟ್ಟಿರಲಿಲ್ಲ. ಡರೆನ್ ಒಬ್ರಿಯಾನ್ ನೇತೃತ್ವದ ಟಿಎಂಸಿ ನಾಯಕರಿಗೂ ಹತ್ರಸ್ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು