×
Ad

ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2020-10-03 20:34 IST

ಮಂಗಳೂರು, ಅ.3: ನಗರದ ಶಿವಭಾಗ್‌ನ ತಾರೆತೋಟದ ಮನೆಯೊಂದರಿಂದ ಹಾಡಹಗಲೇ ಕಳ್ಳತನ ಮಾಡಿದ ಆರೋಪದ ಮೇಲೆ ಮೂವರನ್ನು ಮಂಗಳೂರು ಪೂರ್ವ (ಕದ್ರಿ) ಪೊಲೀಸರು ಬಂಧಿಸಿದ್ದಾರೆ.

ಹಾಸನ ಹೊಳೆನರಸೀಪುರ ನಿವಾಸಿಗಳಾದ ಶಿವಗಾಮಿ (37), ಮಂಜು (28), ಲಚಿಮಿ (30) ಬಂಧಿತ ಆರೋಪಿಗಳು. ಆರೋಪಿಗಳಿಂದ ಕಳವಾದ ಸೊತ್ತು ಮತ್ತು ಕಳವು ಮಾಡಲು ಉಪಯೋಗಿಸಿದ ಸಾಧನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಶಿವಭಾಗ್ ತಾರೆತೋಟದ ಬಳಿ ನಿವಾಸಿಯೊಬ್ಬರು ಸೆ.13ರಂದು ಹಗಲು ಹೊತ್ತು ಮನೆಗೆ ಲಾಕ್ ಮಾಡಿ ಹೊರಗೆ ಹೋದ ಸಂದರ್ಭ ಕಳ್ಳರು 1.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 18ಸಾವಿರ ರೂ. ನಗದು ಕಳವು ಮಾಡಿದ್ದರು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಮಾರ್ಗದರ್ಶನದಂತೆ ಡಿಸಿಪಿಗಳಾದ ಅರುಣಾಂಶುಗಿರಿ, ವಿನಯ್ ಗಾಂವ್ಕರ್ ನಿರ್ದೇಶನದಂತೆ ಎಸಿಪಿ ಜಗದೀಶ್ ನೇತೃತ್ವದಲ್ಲಿ ಕದ್ರಿ ಇನ್‌ಸ್ಪೆಕ್ಟರ್ ಸವಿತ್ರ ತೇಜ, ಎಸ್‌ಐಗಳಾದ ಅನಿತಾ ನಿಕ್ಕಂ, ಜ್ಞಾನಶೇಖರ, ಎಎಸ್‌ಐ ಶಶಿಧರ್ ಶೆಟ್ಟಿ, ಜನಾರ್ದನ ನಾಯ್ಕ ಮತ್ತು ಸಿಬ್ಬಂದಿ ಜಯಾನಂದ, ಉಮೇಶ್ ಕೊಟ್ಟಾರಿ, ಆಶಿತ್, ದಿನೇಶ್, ರಾಘವೇಂದ್ರ, ನಾಗರಾಜ, ದೇವಿಪ್ರಸಾದ್, ಪ್ರಮೀಳಾರವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News