×
Ad

ಅಂಚೆ ಕಚೇರಿಗಳಲ್ಲಿ ಅ.6ರಂದು ಆಧಾರ್ ಅಭಿಯಾನ

Update: 2020-10-03 22:03 IST

ಉಡುಪಿ, ಅ.3: ಉಡುಪಿ ಅಂಚೆ ವಿಭಾಗವು ಅ.6ರಂದು ಉಡುಪಿ ಅಂಚೆ ವಿಭಾಗದ ಅಂಚೆ ಕಚೇರಿಗಳಲ್ಲಿ ಆಧಾರ್ ಅಭಿಯಾನ ವನ್ನು ಹಮ್ಮಿಕೊಂಡಿದೆ. ಆಯ್ದ ಅಂಚೆ ಕಚೇರಿಗಳಲ್ಲಿ ಗರಿಷ್ಟ 150 ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇವೆ ಲಭ್ಯವಿದ್ದು, ಪ್ರತೀ ಕಚೇರಿಯಲ್ಲಿ ಬೆಳಿಗ್ಗೆ 8ರಿಂದ ಆಧಾರ್ ಅಭಿಯಾನ ಆರಂಭವಾಗಲಿದೆ. ಆಸಕ್ತರು ಮುಂಗಡ ಟೋಕನ್ ಪಡೆದು ಕೊಂಡು ನಿಗದಿತ ಸಮಯಕ್ಕೆ ಅಂಚೆ ಕಚೇರಿಗೆ ಭೇಟಿ ನೀಡಿ ಆಧಾರ್ ಸಂಬಂಧಿತ ಸೆೀವೆಯನ್ನು ಪಡೆದುಕೊಳ್ಳಬಹುದು.

ಆಧಾರ್ ಅಭಿಯಾನ ನಡೆಯುವ ಅಂಚೆ ಕಚೇರಿಗಳು: ಉಡುಪಿ ಪ್ರಧಾನ ಅಂಚೆ ಕಚೇರಿ, ಕುಂದಾಪುರ ಪ್ರಧಾನ ಅಂಚೆ ಕಚೇರಿ, ಪಡುಬಿದ್ರೆ, ಬ್ರಹ್ಮಾವರ, ಬಸ್ರೂರು, ಕೊಲ್ಲೂರು, ಅಂಬಲಪಾಡಿ, ಕ್ರೋಡಾಶ್ರಮ, ಶಂಕರಪುರ, ತಲ್ಲೂರು, ಮಿಷನ್ ಕಾಂಪೌಂಡ್, ಕೊಕ್ಕರ್ಣೆ, ಹಂಗಾರಕಟ್ಟೆ, ಎರ್ಮಾಳು, ಮಣಿಪಾಲ ಪ್ರಧಾನ ಅಂಚೆ ಕಚೇರಿ, ಕಾಪು, ಕೋಟೇಶ್ವರ, ಬೈಂದೂರು, ಗಂಗೊಳ್ಳಿ, ಪರ್ಕಳ, ಸಾಲಿಗ್ರಾಮ, ಹೆಜಮಾಡಿ, ಹಿರಿಯಡ್ಕ, ಪಿಲಾರು, ಕೆಮ್ಮಣ್ಣು, ಪೆರ್ಡೂರು, ಉಡುಪಿ ಕೋರ್ಟ್, ಕಟಪಾಡಿ, ಶಿರ್ವ, ಉದ್ಯಾವರ, ಕುಂಜಿಬೆಟ್ಟು, ವಂಡ್ಸೆ, ಸಿದ್ಧಾಪುರ, ಬಾರ್ಕೂರು, ಶಂಕರನಾರಾಯಣ, ತ್ರಾಸಿ, ಉಚ್ಚಿಲ, ಕಂಬದಕೋಣೆ, ಸಾಸ್ತಾನ, ಶೀರೂರು ಮತ್ತು ಕಲ್ಯಾಣಪುರ ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇವೆ ಲಭ್ಯವಿರುತ್ತದೆ.

ಕೋವಿಡ್-19 ನಿಯಮಾವಳಿಗಳನ್ನು ಪಾಲಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್, ಸ್ಯಾನಿಟೈಸರ್ ಉಪಯೋಗದೊಂದಿಗೆ ಅಗತ್ಯ ಮುಂಜಾಗೃತ ಕ್ರಮವನ್ನು ಕೈಗೊಂಡು ಆಧಾರ್ ಅಭಿಯಾನದ ಸದುಪಯೋಗ ಪಡೆದು ಕೊಳ್ಳುವಂತೆ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News