ಬಾವಿಗೆ ಬಿದ್ದು ಮಹಿಳೆ ಮೃತ್ಯು

Update: 2020-10-03 16:40 GMT

ಕೋಟ, ಅ.3: ಮಹಿಳೆಯೊಬ್ಬರು ತನ್ನ ಗಂಡನ ಮನೆಯ ಆವರಣವಿಲ್ಲದ ಬಾವಿಗೆ ಅಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ನಿಡ್ಲಾಡಿಯಲ್ಲಿ ಸಂಭವಿಸಿದೆ. ಮೃತರನ್ನು ಸಿದ್ಧಾಪುರ ಕೊಳ್ಕೆಬೈಲು ಗ್ರಾಮದ ವಿಠಲ ಕುಲಾಲ್ ಎಂಬವರ ಮಗಳು ಹೇಮಾ (34) ಎಂದು ಗುರುತಿಸಲಾಗಿದೆ.

ಆರು ವರ್ಷಗಳ ಹಿಂದೆ ಮದುವೆಯಾದ ಹೇಮಾ ಅವರಿಗೆ ಇಬ್ಬರು ಮಕ್ಕಳಿದ್ದು, ಗಂಡ ಬೆಂಗಳೂರಿನಲ್ಲಿ ಹೊಟೇಲ್‌ನಲ್ಲಿ ದುಡಿಯುತ್ತಿರುವುದರಿಂದ ತಂದೆಯ ಮನೆಯಲ್ಲಿ ಇದ್ದರು. ವಾರದ ಹಿಂದೆ ಗಂಡನ ಮನೆಯಾದ ನಿಡ್ಲಾಡಿಗೆ ಹೋದವರು ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಆವರಣವಿಲ್ಲದ ಬಾವಿಯಲ್ಲಿ ನೀರು ಸೇದುವಾಗ ಅಕಸ್ಮಿಕವಾಗಿ ಕಾಲುಜಾರಿ ಬಿದ್ದಾಗ, ತಕ್ಷಣ ಮೇಲೆತ್ತಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅವರಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News