×
Ad

ಹತ್ರಸ್: ಸಂತ್ರಸ್ತೆಯ ಮನೆಗೆ ಕೇಂದ್ರ ಗೃಹ ಕಾರ್ಯದರ್ಶಿ ಭೇಟಿ

Update: 2020-10-03 22:25 IST

ಹೊಸದಿಲ್ಲಿ, ಅ.3: ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಸಂತ್ರಸ್ತ ಯುವತಿಯ ಕುಟುಂಬದವರ ಎಲ್ಲಾ ಪ್ರಶ್ನೆ ಹಾಗೂ ಸಂದೇಹಗಳನ್ನು ನಿವಾರಿಸಲಿದೆ ಎಂದು ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ(ಗೃಹ) ಅವನೀಶ್ ಅವಸ್ಥಿ ಹೇಳಿದ್ದಾರೆ.

ಅವನೀಶ್ ಅವಸ್ಥಿ ಶನಿವಾರ ಉತ್ತರಪ್ರದೇಶ ಪೊಲೀಸ್ ಮಹಾನಿರ್ದೇಶಕರೊಂದಿಗೆ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಮನೆಯವರೊಂದಿಗೆ ಮಾತನಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಟುಂಬದವರು ಕೆಲವೊಂದು ವಿಷಯವನ್ನು ಪ್ರಸ್ತಾವಿಸಿದ್ದು ಈ ಬಗ್ಗೆ ಎಸ್‌ಐಟಿ ಗಮನ ಹರಿಸಲಿದೆ. ಜನ ಪ್ರತಿನಿಧಿಗಳು ಹತ್ರಸ್ ಗ್ರಾಮಕ್ಕೆ ಭೇಟಿ ನೀಡಬಹುದು. ಆದರೆ ಒಂದು ಬಾರಿ ಐದು ಜನರಿಗೆ ಮಾತ್ರ ಅವಕಾಶವಿದೆ ಎಂದು ಹೇಳಿದ್ದಾರೆ. ಎಸ್‌ಐಟಿ ಈಗಾಗಲೇ ತನ್ನ ಕಾರ್ಯ ಆರಂಭಿಸಿದ್ದು ಶುಕ್ರವಾರ ಮೊದಲ ವರದಿ ನೀಡಿದೆ. ಈ ಆಧಾರದಲ್ಲಿ ಹತ್ರಸ್ ಎಸ್‌ಪಿ, ಸರ್ಕಲ್ ಆಫೀಸರ್, ಸೀನಿಯರ್ ಎಸ್‌ಐ ಸಹಿತ ಹಲವರನ್ನು ಅಮಾನತುಗೊಳಿಸಲಾಗಿದೆ.

ಗ್ರಾಮದಲ್ಲಿ ಭದ್ರತಾ ವ್ಯವಸ್ಥೆಯನ್ನು ಮುಂದುವರಿಸಿರುವುದಾಗಿ ಡಿಜಿಪಿ ಭರವಸೆ ನೀಡಿದ್ದಾರೆ ಎಂದು ಅವಸ್ಥಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News