×
Ad

ಬುರೂಜ್ ಸ್ಕೂಲ್ ನಲ್ಲಿ ಗಾಂಧಿ ಜಯಂತಿ

Update: 2020-10-03 23:18 IST

ಬಿ.ಸಿ.ರೋಡ್ : ಕಲಾಬಾಗಿಲು ರಝಾನಗರ ಬುರೂಜ್ ಆಂಗ್ಲ ಮಾಧ್ಯಮ  ಸ್ಕೂಲ್ ನಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.

ಶಾಲಾ ಸಂಚಾಲಕ ಶೇಕ್  ರಹ್ಮತ್ತುಲ್ಲಾಹ್ ಮಹಾತ್ಮಾ ಗಾಂಧಿಜಿಯ ಭಾವ ಚಿತ್ರಕ್ಕೆ ಮೂಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಶೇಕ್ ಸಾದಿಯ ಕುರ್ ಆನ್, ಸುಪ್ರೀತಾ ಭಗವತ್ ಗೀತೆ, ಎಲ್ಸಿ ಬೈಬಲ್ ಪಠಿಸಿದರು . 

ಶಿಕ್ಷಕಿಯರಾದ ಚೇತನಾ, ಪ್ರಿನ್ಸಿ ಬ್ರಿಟ್ಟೊ, ಹರಿಣಾಕ್ಷಿ, ಶೇಕ್ ಅಸ್ಮಾ, ನೂರ್ ಜಹಾನ್, ಚಂದ್ರಾವತಿ, ಅನ್ನ ಪೂರ್ಣೇಷ್ವರಿ ಮಮತಾ ಸರ್ವ ಧರ್ಮ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಸ್ಥಳೀಯರಾದ ಅಬ್ದುಲ್ ಶುಕೂರ್ ಉಮ್ಮೆ ಅಯ್ಮನ್, ಲೀಶಾ ಶೆಟ್ಟಿ, ವಿಶಾಲ್ ಕುಲಾಲ್ ಪ್ರಥ್ವೀನ್, ಆಫ್ ನಾನ್  ಮೊದಲಾದವರು ಉಪಸ್ಥಿತರಿದ್ದರು. 

ಚೇತನ ಸ್ವಾಗತಿಸಿ, ಮಮತಾ ವಂದಿಸಿದರು. ಎಲ್ಸಿ ಲಸ್ರಾದೋ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News