ತಲಪಾಡಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಟೋಲ್ ಕೇಂದ್ರಕ್ಕೆ ಮನವಿ

Update: 2020-10-03 18:06 GMT

ಉಳ್ಳಾಲ, ಫಾಸ್ಟ್ ಟ್ಯಾಗ್ ಇಲ್ಲದೇ ಸಂಚರಿಸುವ ವಾಹನಗಳಿಗೆ ತಲಪಾಡಿ ಟೋಲ್ ಗೇಟ್ ನಲ್ಲಿ ತಲಾ ಎರಡು ಗೇಟುಗಳ ಮೂಲಕ ಸಂಚರಿಸಲು ಅವಕಾಶ ಒದಗಿಸಿ ಕೊಡುವಂತೆ ಒತ್ತಾಯಿಸಿ  ತಲಪಾಡಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ತಲಪಾಡಿ ನವಯುಗ ಟೋಲ್ ಕೇಂದ್ರ ದ ವ್ಯವಸ್ಥಾಪಕರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ರಿಗೆ ಮನವಿ ಅರ್ಪಿಸಲಾಯಿತು.

ತಾ.ಪಂ.ಸದಸ್ಯ ಸಿದ್ದೀಕ್ ತಲಪಾಡಿ, ಡಿವೈಎಫ್ಐ ಮುಖಂಡ ಅಶ್ರಫ್ ಕೆ ಸಿ ರೋಡ್, ಡಿಸಿಸಿ ಸದಸ್ಯ ಬಿ.ಎಸ್.ಇಸ್ಮಾಯಿಲ್, ಟಿ.ಎ.ಟಿ ಖಾದರ್, ನಾಗರಿಕ ಹೋರಾಟ ಸಮಿತಿ ಸದಸ್ಯ ಇಸ್ಮಾಯಿಲ್ ತಲಪಾಡಿ, ಹಸನ್ ತಲಪಾಡಿ,ಕೆ.ಪಿ.ಹಾಸಿಂ, ಅಬ್ದುಲ್ ರಹಿಮಾನ್ ತಲಪಾಡಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News