×
Ad

ಬ್ರಿಟನ್: ಮೂರು ತಿಂಗಳೊಳಗೆ ಕೋವಿಡ್-19 ಲಸಿಕೆ ಬಿಡುಗಡೆ

Update: 2020-10-03 23:52 IST

ಲಂಡನ್,ಅ.4: ಆಕ್ಸ್‌ಫರ್ಡ್ ವಿವಿಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಯನ್ನು ಮೂರು ತಿಂಗಳೊಳಗೆ ಸಾರ್ವಜನಿಕವಾಗಿ ಬಳಕೆಗಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದೆಂದು 'ದಿ ಟೈಮ್ಸ್ ' ಪತ್ರಿಕೆಯು ಬ್ರಿಟಿಷ್ ಸರಕಾರದ ವಿಜ್ಞಾನಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ವರದಿ ಮಾಡಿದೆ..

ಈ ಲಸಿಕೆಗೆ 2021ರ ಮೊದಲು ಅನುಮೋದನೆ ದೊರೆಯುವ ನಿರೀಕ್ಷೆಯಿದೆಯೆಂದು ಆಕ್ಸ್‌ಫರ್ಡ್ ವಿವಿ ವಿಜ್ಞಾನಿಗಳು ತಿಳಿಸಿದ್ದಾರೆ. ಸಮಗ್ರ ಕೋವಿಡ್-19 ರೋಗನಿರೋಧಕ ಕಾರ್ಯಕ್ರಮದಡಿ ಮಕ್ಕಳನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಈ ಲಸಿಕೆಯನ್ನು 6 ತಿಂಗಳೊಳಗೆ ನೀಡಬಹುದಾಗಿದೆ ಎಂದು ದಿ ಟೈಮ್ಸ್ ವರದಿ ತಿಳಿಸಿದೆ.

 ಈ ಲಸಿಕೆಯು ಯುರೋಪ್ ಖಂಡದಲ್ಲಿ ಅಧಿಕೃತವಾಗಿ ಅನುಮೋದನೆ ಪಡೆದುಕೊಂಡಿರುವ ಮೊದಲ ಕೋವಿಡ್-19 ಲಸಿಕೆಯಾಗಿದೆ. ಈ ಲಸಿಕೆಯನ್ನು ಸಾರ್ವಜನಿಕರಿಗೆ ನೀಡುವುದಕ್ಕೆ ಆರೋಗ್ಯ ಕಾರ್ಯಕರ್ತರನ್ನು ಬೃಹತ್ ಸಂಖ್ಯೆಯಲ್ಲಿ ನಿಯೋಜಿಸಲು ಅವಕಾಶ ನೀಡಲು ಬ್ರಿಟಿಶ್ ಸರಕಾರ ಪರಿಶೀಲಿಸುತ್ತಿದೆಯೆಂದು ದಿ ಟೈಮ್ಸ್ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News