ಹತ್ರಸ್ ಜಿಲ್ಲಾಧಿಕಾರಿಯಿಂದ ಸಂತ್ರಸ್ತ ಕುಟುಂಬದವರಿಗೆ ಬೆದರಿಕೆ, ಸರಕಾರದ ಮೌನಕ್ಕೆ ಮಾಯಾವತಿ ಆತಂಕ
Update: 2020-10-04 15:08 IST
ಲಕ್ನೊ, ಅ.4: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿರುವ ದಲಿತ ಯುವತಿಯ ಕುಟುಂಬದವರಿಗೆ ಹತ್ರಸ್ ಜಿಲ್ಲಾಧಿಕಾರಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದ್ದರೂ ಸರಕಾರ ಮೌನವಾಗಿರುವುದನ್ನು ಕಂಡು ದುಃಖವಾಗುತ್ತಿದೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಸರಕಾರ ಸಿಬಿಐ ತನಿಖೆಗೆ ಒಪ್ಪಿಸಲು ಶಿಫಾರಸು ಮಾಡಿದೆ. ಆದರೆ, ಗಂಭೀರ ಆರೋಪ ಎದುರಿಸುತ್ತಿರುವ ಜಿಲ್ಲಾಧಿಕಾರಿ ಹತ್ರಸ್‌ನಲ್ಲಿ ಇರುವಾಗ ನಿಷ್ಪಕ್ಷ ತನಿಖೆ ನಡೆಯಲು ಹೇಗೆ ಸಾಧ್ಯ? ಎಂಬುದು ನನಗೆ ಚಿಂತೆಯಾಗಿದೆ ಎಂದರು.
ಹತ್ರಸ್ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಗುರುವಾರ ಸಂತ್ರಸ್ತ ಯುವತಿಯ ಕುಟುಂಬದವರನ್ನು ಭೇಟಿಯಾದ ಸಂದರ್ಭ ಅವರಿಗೆ ಬೆದರಿಕೆ ಹಾಕಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.