ಗಾಂಧಿ ಜಯಂತಿಗೆ ವಿಶೇಷ ಆರಾಧನೆ
Update: 2020-10-04 17:38 IST
ಮಂಗಳೂರು, ಅ.4: ನಗರದ ಜೆಪ್ಪು ಸಂತ ಆಂತೋನಿ ಆಶ್ರಮ ವತಿಯಿಂದ ಗಾಂಧಿ ಜಯಂತಿಯಂದು ಕೊರೋನ ತೊಲಗಲು ಮತ್ತು ಶಾಂತಿ ನೆಲೆಸಲು ಮೂರು ಗಂಟೆಗಳ ಆರಾಧನೆ ನಡೆಸಿ ಬಲಿ ಪೂಜೆ ಅರ್ಪಿಸಲಾಯಿತು.
ಆಶ್ರಮದ ನಿರ್ದೇಶಕ ಫಾ. ಒನಿಲ್ ಡಿಸೋಜ ಮತ್ತು ಜೆಪ್ಪು ಸಂತ ಜೋಸೆಫ್ ದೇವಾಲಯದ ಧರ್ಮಗುರು ಕ್ಲಿರ್ಡ್ ಫೆರ್ನಾಂಡಿಸ್ ಆರಾಧನೆ ನಡೆಸಿಕೊಟ್ಟರು.
ಫಾ. ರಿಚ್ಚರ್ಡ್ ಕ್ವಾಡ್ರಸ್(ಕಾಪುಚಿನ್) ವ್ಯಾದಿಸ್ತರಿಗಾಗಿ ಪ್ರಾರ್ಥಿಸಿ ಬಲಿ ಪೂಜೆ ಅರ್ಪಿಸಿದರು. ಮಂಗಳೂರು ಸೇವಾ ಪಂಗಡ (ಕ್ಯಾರಿಸ್ಮಟಿಕ್) ಸ್ತುತಿ-ಆರಾಧನೆ ನಡೆಸಿದರು. ಜೋನ್ ಡಿಸೋಜ ಫೆರಾರ್ ಸಂಗೀತ ಒದಗಿಸಿದರು.