ಪಂಜಿಮೊಗರು: ಹತ್ರಸ್ ಘಟನೆ ಖಂಡಿಸಿ ಡಿವೈಎಫ್‌ಐ ಧರಣಿ
Update: 2020-10-04 17:42 IST
ಮಂಗಳೂರು, ಅ.4: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯ ಅತ್ಯಾಚಾರ, ಕೊಲೆ ಮತ್ತು ಉತ್ತರ ಪ್ರದೇಶದ ಪೊಲೀಸರು ನಡೆಸಿದ ಅಮಾನವೀಯ ಅಂತ್ಯಸಂಸ್ಕಾರದ ಕ್ರಮವನ್ನು ಖಂಡಿಸಿ ಡಿವೈಎಫ್‌ಐ ಪಂಜಿಮೊಗರು ಘಟಕದ ವತಿಯಿಂದ ಶನಿವಾರ ಪಂಜಿಮೊಗರು ಜಂಕ್ಷನ್‌ನಲ್ಲಿ ಮೊಂಬತ್ತಿ ಬೆಳಗಿಸಿ ಧರಣಿ ನಡೆಸಲಾಯಿತು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಯುವ ವಕೀಲ ಚಣ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿದರು.
ಡಿವೈಎಫ್‌ಐ ಮುಖಂಡರಾದ ಖಲೀಲ್, ನೌಶಾದ್, ಬಶೀರ್, ಮುಸ್ತಫಾ, ಶರೀಫ್, ಅನಿಲ್, ನವೀನ್, ಫಾತಿಮಾ, ಸೌಮ್ಯಾ, ಜಯ, ಸುಲೈಮಾನ್, ಸಮದ್, ಅರುಣ್ ರಾಯಿಕಟ್ಟೆ, ಡೆನ್ನಿಸ್, ಸ್ಟೀವನ್ ನೇತೃತ್ವ ವಹಿಸಿದ್ದರು.