×
Ad

​‘ಬಡ್ಡ ಕುದ್ರು’ ದ್ವೀಪಕ್ಕೆ ತೂಗು ಸೇತುವೆ ನಿರ್ಮಿಸಲು ಮನವಿ

Update: 2020-10-04 17:46 IST

ಮಂಗಳೂರು, ಅ.4: ಹಿರಿಯರ ಕಾಲದಿಂದಲೂ ನಾವಿಲ್ಲೇ ಬದುಕು ಸಾಗಿಸುತ್ತಿದ್ದೇವೆ. ಅನಾರೋಗ್ಯ ಬಂದರೆ ಚಿಕಿತ್ಸೆಗೂ ಪರದಾಡುತ್ತಿದ್ದೇವೆ. ಮಕ್ಕಳಿಗೆ ಶಾಲೆಗೆ ತೆರಳಲು ಸಮಸ್ಯೆಯಾಗುತ್ತಿದೆ. ಮಳೆಗಾಲದಲ್ಲಿ ನದಿ ಉಕ್ಕಿ ಹರಿದಾಗ ದೋಣಿಯಲ್ಲೂ ದಾಟಲು ಆಗದ ಸ್ಥಿತಿ ಇದೆ. ಕಳೆದ ಐವತ್ತು ವರ್ಷಗಳಲ್ಲಿ ಯಾರೊಬ್ಬರೂ ನಮ್ಮ ಅಹವಾಲು ಆಲಿಸಲು ಬಂದಿಲ್ಲ. ನೀವೀಗ ಬಂದಿದ್ದೀರಿ. ನಮಗೊಂದು ತೂಗು ಸೇತುವೆಯನ್ನಾದರೂ ಮಾಡಿಕೊಡಿ...

ಇದು ಮಂಗಳೂರು ಮಹಾನಗರ ಪಾಲಿಕೆಗೆ ಒಳಪಟ್ಟ ಮರಕಡ ವಾರ್ಡ್ 14ರ ಬಡ್ಡಕುದ್ರುವಿಗೆ ಶನಿವಾರ ಶಾಸಕ ಡಾ.ಭರತ್ ಶೆಟ್ಟಿ ಭೇಟಿ ನೀಡಿದಾಗ ಅಲ್ಲಿನ ನಿವಾಸಿಗಳು ಕೋರಿಕೊಂಡ ಮನವಿಯಾಗಿದೆ.

ಶಾಸಕರು ದೋಣಿಯಲ್ಲಿ ಪ್ರಯಾಣಿಸಿದಾಗ ದ್ವೀಪದ ಜನರು ಅನೇಕ ಬೇಡಿಕೆಗಳನ್ನು ಮುಂದಿಟ್ಟರು. ಸ್ಥಳೀಯ ಹಿರಿಯರಾದ ಸದಾಶಿವ ಪೂಜಾರಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾ ‘ತ್ಯಾಜ್ಯವನ್ನೇ ಸಂಗ್ರಹಿಸದ ಮನಪಾ ನಮ್ಮ ಮೇಲೆ ತ್ಯಾಜ್ಯ ತೆರಿಗೆ ಹಾಕುತ್ತಿರುವುದು ಯಾವ ನ್ಯಾಯ?’ ಎಂದು ಕೇಳಿದರು.

‘ತೂಗು ಸೇತುವೆ ನಿರ್ಮಾಣಕ್ಕೆ ತಾಂತ್ರಿಕ ಸಲಹೆಯ ಅಗತ್ಯವಿದೆ. ತಜ್ಞ ಇಂಜಿನಿಯರುಗಳಲ್ಲಿ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ತ್ಯಾಜ್ಯ ತೆರಿಗೆಯಲ್ಲಿ ವಿನಾಯಿತಿ ನೀಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಈ ಸಂದರ್ಭ ಮನಪಾ ಸದಸ್ಯ ಲೋಹಿತ್ ಅಮೀನ್, ವಾಮನ ಪೂಜಾರಿ, ಬಿಜೆಪಿ ಮುಖಂಡರಾದ ತಿಲಕರಾಜ್ ಕೃಷ್ಣಾಪುರ, ರಾಜೇಶ್ ಕೊಟ್ಟಾರಿ, ಹರೀಶ್ ಶೆಟ್ಟಿ, ಅಮರೇಶ್ ಬೇಕಲ್, ಸುನೀಲ್, ಧನಂಜಯ್, ಶ್ರವಣ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News