×
Ad

​ಕೆ.ಸಿ.ರೋಡ್: ಬೇಕಲ್ ಉಸ್ತಾದ್ ಅನುಸ್ಮರಣೆ

Update: 2020-10-04 17:47 IST

ಕೆ.ಸಿ.ರೋಡ್, ಅ.4: ಸುನ್ನಿ ಕೊ ಓರ್ಡಿನೇಶನ್ ತಲಪಾಡಿ ರೇಂಜ್ ವತಿಯಿಂದ ಬೇಕಲ್ ಉಸ್ತಾದ್ ಅವರ ಅನುಸ್ಮರಣೆ ಹಾಗೂ ಖತ್ಮುಲ್ ಕುರ್‌ಆನ್ ತಹ್ಲೀಲ್ ಮಜ್ಲಿಸ್ ಕಾರ್ಯಕ್ರಮವು ಇತ್ತೀಚೆಗೆ ಕೆ.ಸಿ.ರೋಡ್‌ನ ಅಲ್ ಮುಬಾರಕ್ ಜುಮಾ ಮಸ್ಜಿದ್‌ನಲ್ಲಿ ಜರಗಿತು.

ಝೈನುಲ್ ಉಲಮಾ ಮಾಣಿ ಉಸ್ತಾದ್ ದುಆಗೈದರು. ಅಲ್ಹಾಜ್ ಕೆಪಿ ಹುಸೈನ್ ಸಅದಿ ಅನುಸ್ಮರಣೆ ಭಾಷಣಗೈದರು. ಡಾ. ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಇಬ್ರಾಹಿಂ ಫೈಝಿ ಉಚ್ಚಿಲ, ಮುನೀರ್ ಸಖಾಫಿ, ಬಶೀರ್ ಅಹ್ಸನಿ, ಮಸೀದಿಯ ಅಧ್ಯಕ್ಷ ಅಬ್ಬಾಸ್ ಕೊಲಂಗರೆ, ಎಸ್‌ಎಂಎ ಅಧ್ಯಕ್ಷ ಅಬ್ಬಾಸ್ ಹಾಜಿ, ಅಹ್ಮದ್ ಕುಂಞಿ ಹಾಜಿ ಪಿಲಿಕೂರ್, ಎಸ್‌ವೈಎಸ್ ಕೆಸಿ ರೋಡ್ ಅಧ್ಯಕ್ಷ ಎಂಪಿ ಮುಹಮ್ಮದ್, ಕೆ.ಎಚ್. ಇಬ್ರಾಹಿಂ, ಸಿದ್ದೀಕ್ ಕೊಮರಂಗಳ ಭಾಗವಹಿಸಿದ್ದರು.

ಅಬ್ದುಲ್ ಸಲಾಂ ಮದನಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News