‘ಜನರಿಲ್ಲದ ಸುರಂಗದಲ್ಲಿ ಕೈಬೀಸಿದ ಮೋದಿ’: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್

Update: 2020-10-04 13:01 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಹಿಮಾಚಲ ಪ್ರದೇಶ ರೋಹ್ಟಂಗ್ ನಲ್ಲಿ 9.02 ಕಿಲೋಮೀಟರ್ ಉದ್ದದ ಅಟಲ್ ಸುರಂಗವನ್ನು ಉದ್ಘಾಟಿಸಿದರು. ಇದು ಮನಾಲಿ ಮತ್ತು ಲಹಾವುಲ್ ಸ್ಪಿಟಿ ಕಣಿವೆ ನಡುವಿನ ಪ್ರಯಾಣ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಇದು 10000 ಅಡಿಗಿಂತ ಎತ್ತರದಲ್ಲಿರುವ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಎನ್ನಲಾಗಿದೆ. ಇದು ಆ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಲಿದ್ದು, ಸಶಸ್ತ್ರ ಪಡೆಗಳು ಕ್ಷಿಪ್ರವಾಗಿ ಲಡಾಖ್ಗೆ ತೆರಳಲು ಕೂಡಾ ಅನುಕೂಲವಾಗಲಿದೆ.

ಉದ್ಘಾಟನಾ ಸಮಾರಂಭದ ಅಂಗವಾಗಿ ಮೋದಿ ಸುರಂಗದಲ್ಲಿ ಸ್ವಲ್ಪದೂರ ನಡೆದುಕೊಂಡು ಹೋಗಿ ಬಳಿಕ ತೆರೆದ ವಾಹನದಲ್ಲಿ ಪ್ರಯಾಣಿಸಿದರು. ಆದರೆ ಖಾಲಿ ಸುರಂಗದಲ್ಲಿ ಮೋದಿ ಕೈಬೀಸುತ್ತಾ ಇರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯದ ವಸ್ತುವಾಗಿದೆ.

"ಮೋದಿ ಯಾರಿಗೆ ಕೈಬೀಸಿದರು? ಹಾಗೇಕೆ ಮಾಡಿದರು" ಎಂದು ಜಾಲತಾಣಿಗರು ಪ್ರಶ್ನೆ ಮಾಡಿದ್ದಾರೆ.

ಈ ಹಿಂದೆ ಶ್ರೀನಗರದ ದಾಲ್ ಸರೋವರಲ್ಲಿ ಕೂಡಾ ದೋಣಿಯಿಂದ ಹೀಗೆ ಕೈ ಬೀಸಿದ್ದು ಸಾಮಾಜಿಕ ಜಾಲತಾಣಿಗರಿಗೆ ಒಗಟಾಗಿ ಪರಿಣಮಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News