×
Ad

ಉಡುಪಿ: ಸರ್ಕಲ್‌ನಿಂದ ತೆರವುಗೊಳ್ಳದ ಕಟ್ಟಡದ ಅವಶೇಷ; ಆರೋಪ

Update: 2020-10-04 19:27 IST

ಉಡುಪಿ, ಅ.4: ಕೆಲವು ದಿನಗಳ ಹಿಂದೆ ಕುಸಿದು ಬಿದ್ದ ನಗರದ ಚಿತ್ತರಂಜನ್ ಸರ್ಕಲ್ ಬಳಿ ಇರುವ ರೋಯಲ್ ಮಾಲ್ ಕಟ್ಟಡದ ಅವಶೇಷಗಳನ್ನು ಈವರೆಗೆ ತೆರವುಗೊಳಿಸದಿರುವುದರಿಂದ ವಾಹನ ಸಂಚಾರ ಹಾಗೂ ಜನ ಓಡಾಟಕ್ಕೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸೆ.18ರಂದು ರೋಯಲ್ ಮಾಲ್ ಕಟ್ಟಡದ ಒಂದು ಪಾರ್ಶ್ವ ಕುಸಿದು ಬಿದ್ದಿದ್ದು, ಅದರ ಅವಶೇಷಗಳು ರಸ್ತೆಯಲ್ಲಿ ಇರುವುದರಿಂದ ಚಿತ್ತರಂಜನ್ ಸರ್ಕಲ್‌ನ ಒಂದು ಬದಿಯ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದೆ. ರಸ್ತೆಗೆ ಬ್ಯಾರಿಕೇಡ್ ಆಳವಡಿಸಿ ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಇದರಿಂದ ಪ್ರತಿಬಾರಿ ಈ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ ಜನ ಕೂಡ ಸುತ್ತಿ ಬಳಸಿ ಸಂಚರಿಸುವ ತೊಂದರೆ ಎದುರಾಗಿದೆ. ಆದಷ್ಟು ಕೂಡಲೇ ಈ ಅವಶೇಷಗಳನ್ನು ರಸ್ತೆಯಿಂದ ತೆರವುಗೊಳಿಸಿ ಈ ಸರ್ಕಲ್‌ನ್ನು ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಬೇಕು ಎಂದು ಸ್ಥಳೀಯರು ನಗರಸಭೆಯನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News