ಮಲ್ಪೆ: ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ ನಲ್ಲಿ ಗಾಂಧಿ ಜಯಂತಿ ಆಚರಣೆ

Update: 2020-10-04 14:42 GMT

ಮಲ್ಪೆ: ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ ಮಲ್ಪೆಯಲ್ಲಿ ಗಾಂಧಿ ಜಯಂತಿಯನ್ನು 'ಗಾಂಧೀಜಿಯವರ ವಿಚಾರಗಳ ಪ್ರಸ್ತುತತೆ' ಎಂಬ ವಿಷಯದಲ್ಲಿ ವಿಚಾರ ಮಂಡನೆಯೊಂದಿಗೆ ಆಚರಿಸಲಾಯಿತು.

ವಿಚಾರ ಮಂಡನೆ ಮಾಡಿದ ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸಯನ್ಸ್ ನ ನಿರ್ದೇಶಕರಾದ ವರದೇಶ್ ಹಿರೇಗಂಗೆಯವರು ಮಾತನಾಡಿ, ಗಾಂಧೀಜಿಯಂತಹ ಒಬ್ಬ ಮನುಷ್ಯ ಈ ಭೂಮಿಯ ಮೇಲೆ ಬದುಕಿದ್ದರು ಎಂಬುದನ್ನು ನಂಬುವುದೇ ಅಚ್ಚರಿ ಎನ್ನುವಷ್ಟರ ಮಟ್ಟಿಗೆ ಅವರು ತಮ್ಮನ್ನು ಮೌಲ್ಯಗಳಿಗೆ ಬದ್ಧರಾಗಿಸಿಕೊಂಡಿದ್ದರು. ಆದ್ದರಿಂದಲೇ ಆಲ್ಬರ್ಟ್ ಐನ್ ಸ್ಟೈನ್  ಮತ್ತು ನೆಲ್ಸನ್ ಮಂಡೇಲಾರಂತಹ ಅನೇಕ ಮಹಾನ್ ವ್ಯಕ್ತಿಗಳು ಗಾಂಧೀಜಿಯವರದ್ದು ಒಂದು ಅದ್ಭುತ ವ್ಯಕ್ತಿತ್ವ ಎಂದು ಬಣ್ಣಿಸಿದ್ದಾರೆ. ಅಹಿಂಸೆಯ ಮೂಲಕ ಕ್ರಾಂತಿ ತರಲು ಸಾಧ್ಯ ಎಂಬ ಕ್ರಾಂತಿಕಾರಿ ವಿಚಾರ ಕೊಟ್ಟವರು ಮಹಾತ್ಮ ಗಾಂಧಿ. ಇಂತಹ ವಿಶಿಷ್ಟ ವಿಚಾರಗಳಿಗಾಗಿಯೇ ಅವರು ಹಲವರ ಪಾಲಿಗೆ ಆದರ್ಶವಾಗಿದ್ದರೆ ಮತ್ತೆ ಕೆಲವರ ಟೀಕೆಗಳಿಗೂ ಒಳಗಾಗಿದ್ದರು. ಸತ್ಯ, ನ್ಯಾಯ, ಅಹಿಂಸೆ, ಪ್ರೀತಿ, ಸಹೋದರತೆ, ಸರಳತೆ ಮತ್ತು ಸರ್ವ ಧರ್ಮ ಸಮಭಾವಗಳಂತಹ ಗಾಂಧೀಜಿಯವರ ವಿಚಾರಗಳು ಇಂದಿನ ಭಾರತಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಿದೆ ಎಂದರು.

ಮಲ್ಪೆ ಎಜುಕೇಶನ್ ಟ್ರಸ್ಟ್ ನ ಸದಸ್ಯರಾದ ಕೆ. ಸಲಾಹುದ್ದೀನ್ ಸಾಹೇಬ್ ಗಾಂಧೀಜಿಯವರ ಮಾದರೀ ಬದುಕಿನ ಸಂಕ್ಷಿಪ್ತ ಪರಿಚಯವಿತ್ತರು. 

ಶಾಲಾ ಮುಖ್ಯ ಶಿಕ್ಷಕಿ ಶ್ವೇತಾ ಪ್ರಶಾಂತ್ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು. ಟ್ರಸ್ಟ್ ನ ಅಧ್ಯಕ್ಷರಾದ ಎಫ್. ಎಮ್. ಅಬ್ದುಲ್ ರಝಾಕ್ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಹನಾ ಅನಿಲ್ ಸಮಾರೋಪ ಭಾಷಣ ಮಾಡಿದರು.

ವಿದ್ಯಾರ್ಥಿನಿಯರಾದ ರಿಫಾತ್ ಫಾತಿಮಾ ಸ್ವಾಗತಿಸಿ, ರಿಫಾ ಧನ್ಯವಾದವಿತ್ತರು. ಲೀಫಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News