ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಗಾಂಧಿ ಜಯಂತಿ ಆಚರಣೆ
Update: 2020-10-04 22:56 IST
ಪುತ್ತೂರು: ಈಶ್ವರಮಂಗಲ - ಮೇನಾಲದ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಗಾಂಧಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನ ಸಂಚಾಲಕ ಕೆ.ಅಬುಬಕ್ಕರ್ ಹಾಜಿ ಮಾತನಾಡಿ ಗಾಂಧೀಜಿಯವರ ಸರಳ ಜೀವನ ಹಾಗೂ ಅಹಿಂಸಾ ತತ್ವಗಳ ಕುರಿತು ವಿವರಿಸಿದರು.
ಪಿಯುಸಿ ವಿಭಾಗದ ಮುಖ್ಯಸ್ಥೆ ಉಪನ್ಯಾಸಕಿ ರಮ್ಲತ್. ಕೆ ಸ್ವಾಗತಿಸಿದರು. ಶಿಕ್ಷಕಿ ಶ್ರೀ ಪ್ರಿಯಾ ವಂದಿಸಿದರು. ಶಿಕ್ಷಕಿ ಭವ್ಯಾ, ಶಿಕ್ಷಕೇತರ ವೃಂದದವರಾದ ಹನ್ನತ್, ಇಸ್ಮಾಯಿಲ್ ಸಹಕರಿಸಿದರು.