×
Ad

ಇಂದು ಸೇನಾಸ್ಪತ್ರೆಯಿಂದ ಟ್ರಂಪ್ ಬಿಡುಗಡೆ ಸಾಧ್ಯತೆ

Update: 2020-10-04 23:23 IST

ವಾಶಿಂಗ್ಟನ್,ಆ.4: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೇಹಸ್ಥಿತಿಯಲ್ಲಿ ಸುಧಾರಣೆಯಾಗಿದ್ದು, ಅವರು ಸೋಮವಾರ ವಾಲ್ಟರ್‌ರೀಡ್ ಸೇನಾಸ್ಪತ್ರೆಯಿಂದ ಬಿಡುಗಡಗೊಂಡು ಶ್ವೇತಭವನಕ್ಕೆ ಮರಳುವ ಸಾಧ್ಯತೆಯಿದೆಯೆಂದು ಶ್ವೇತಭವನದ ವೈದ್ಯ ಡಾ. ಸೀನ್ ಕೊನ್ಲೆ ರವಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆನಂತರ ಅವರು ಶ್ವೇತಭವನದಲ್ಲಿದ್ದುಕೊಂಡು ಚಿಕಿತ್ಸೆಯನ್ನು ಮುಂದುವರಿಸಬಹುದಾಗಿದೆ ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷರ ಆರೋಗ್ಯ ನಿಜಕ್ಕೂ ಸುಧಾರಿಸಿದೆ ಎಂದು ಹೇಳಿದ್ದಾರೆ.ಅವರಿಗೆ ಇದುವರೆಗೆ ಜ್ವರದ ಯಾವುದೇ ಲಕ್ಷಣಗಳಿಲ್ಲವೆಂದು ಅವರು ತಿಳಿಸಿದ್ದಾರೆ

ಶನಿವಾರ ಟ್ರಂಪ್ ಅವರ ಆಮ್ಲಜನಕದ ಮಟ್ಟವು ಶೇ.93ಕ್ಕಿಂತ ಕೆಳಗೆ ಇಳಿದಿತ್ತು. ಆನಂತರ ಅವರಿಗೆ ಡೆಕ್ಸಾಮೆಥೆಸೊನ್ ಔಷಧಿಯ ಚಿಕಿತ್ಸೆಯನ್ನು ನೀಡಲಾಗಿತ್ತೆಂದು ಕೊನ್ಲೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News