×
Ad

ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾಗಿ ಮಾಣಿ ಉಸ್ತಾದ್ ಆಯ್ಕೆ

Update: 2020-10-05 15:46 IST

ಉಡುಪಿ, ಅ.5: ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾಗಿದ್ದ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ವಿಯೋಗದಿಂದ ತೆರವಾದ ಸ್ಥಾನಕ್ಕೆ ನೂತನ ಖಾಝಿಯಾಗಿ ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ, ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ಅವರನ್ನು ನೇಮಿಸಲಾಗಿದೆ.

ಸಂಯುಕ್ತ ಜಮಾಅತ್ ಸರ್ವಸದಸ್ಯರ ಸಭೆಯಲ್ಲಿ ತೆಗೆದುಕೊಂಡ ಸರ್ವಾನುಮತದ ಈ ತೀರ್ಮಾನವನ್ನು ಉಡುಪಿಯ ಮಣಿಪಾಲ ಇನ್ ಹೊಟೇಲಿನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಜಮಾಅತ್ ನಿರ್ದೇಶಕ ಯು.ಕೆ.ಮುಸ್ತಫ ಸಅದಿ ಪ್ರಕಟಿಸಿದ್ದಾರೆ.

ಅ.10ರಂದು ಬೆಳಗ್ಗೆ 10 ಗಂಟೆಗೆ ಮೂಳೂರು ಕೇಂದ್ರ ಮಸೀದಿಯಲ್ಲಿ ಖಾಝಿ ಸ್ವೀಕಾರ ಸಮಾರಂಭವು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾದಾತುಗಳು, ಉನ್ನತ ಉಲಮಾಗಳು, ಉಮರಾ ನಾಯಕರು ಭಾಗವಹಿ ಸಲಿರುವರು. ಮಾಣಿ ಉಸ್ತಾದ್, ಸಂಯುಕ್ತ ಜಮಾಅತ್ ವ್ಯಾಪ್ತಿಯ ಉಡುಪಿ ಜಿಲ್ಲೆಯ ಸುಮಾರು 100 ಮಸೀದಿಗಳಿಗೆ ಖಾಝಿಯಾಗಿ ಕಾರ್ಯನಿರ್ವ ಹಿಸಲಿರುವರು ಎಂದವರು ತಿಳಿಸಿದರು.

ಅದೇ ದಿನ ಬೆಳಗ್ಗೆ 11 ಗಂಟೆಗೆ ಅಗಲಿದ ಶೈಖುನಾ ಖಾಝಿ ಬೇಕಲ್ ಉಸ್ತಾದರ ಹೆಸರಿನಲ್ಲಿ ಜಿಲ್ಲಾಮಟ್ಟದ ಪ್ರಾರ್ಥನಾ ಮಜ್ಲಿಸ್ ಹಾಗೂ ಅನು ಸ್ಮರಣಾ ಸಂಗಮ ನಡೆಯಲಿದೆ. 1997ರಲ್ಲಿ ಜಿಲ್ಲಾ ಖಾಝಿಯಾಗಿ ನೇಮಕಗೊಂಡ ಬೇಕಲ ಉಸ್ತಾದ್, ಸುಮಾರು 23 ವರ್ಷಗಳ ಕಾಲ ಖಾಝಿಯಾಗಿ ಸೇವೆ ಸಲ್ಲಿಸಿದ್ದರು ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ.ಅಬೂಬಕರ್ ನೇಜಾರು, ಸಂಘಟನಾ ಕಾರ್ಯದರ್ಶಿ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಮೂಳೂರು, ಕಾಪು ಉಸ್ತಾದ್ ಅಹ್ಮದ್ ಖಾಸಿಮಿ, ಮೂಳೂರು ಕೇಂದ್ರ ಮಸೀದಿಯ ಅಧ್ಯಕ್ಷ ಎಂಎಚ್‌ಬಿ ಮುಹಮ್ಮದ್, ಎಚ್.ಐ.ಯೂಸುಫ್ ಸಖಾಫಿ ಕೋಡಿ, ಅಶ್ರಫ್ ಸಖಾಫಿ ಕನ್ನಂಗಾರ್, ಇಸ್ಮಾಯೀಲ್ ಮುಸ್ಲಿಯಾರ್ ಆಕಳಬೈಲು, ಇಸ್ಮಾಯೀಲ್ ಮದನಿ ಮಾವಿನಕಟ್ಟೆ, ಹಾಜಿ ಚೆರಿಯಬ್ಬ ಮಾವಿನಕಟ್ಟೆ, ಎಚ್.ಬಿ.ಮುಹಮದ್‌ಕನ್ನಂಗಾರ್, ಅಬ್ದುರ್ರಹ್ಮಾನ್ ಸಖಾಫಿ ಕುಂದಾಪುರ, ಅಬ್ದುಲ್ಲತೀಫ್ ಫಾಳಿಲಿ ನಾವುಂದ, ಮನ್ಸೂರ್ ಮರವಂತೆ, ಅಬ್ದುಲ್ ಸತ್ತಾರ್ ನಾವುಂದ, ಪಿ.ಎಂ.ಅಶ್ರಫ್ ಅಮ್ಜದಿ, ಬಿಎಸ್‌ಎಫ್ ರಫೀಕ್ ಕುಂದಾಪುರ, ಶಹಬಾನ್ ಹಂಗಳೂರು, ಮುಹಮ್ಮದ್ ಅಲಿ ಕೋಡಿ, ಅಬ್ದುಲ್ ಹಮೀದ್ ಅದ್ದು ಮೂಳೂರು, ಅಬ್ದುಲ್ ಅಝೀಝ್ ಹೆಜಮಾಡಿ, ಕಾಸಿಂ ಬಾರ್ಕೂರು, ಹಾಜಿ ಮೊಯ್ದಿನ್ ಗುಡ್ವಿಲ್, ಇಬ್ರಾಹೀಂ ತವಕ್ಕಲ್ ಉಚ್ಚಿಲ, ವೈಬಿಸಿ ಬಾವ ಮೂಳೂರು, ಅಬ್ಬು ಹಾಜಿ ಮೂಳೂರು, ಇಬ್ರಾಹೀಂ ಮಾಣಿಕೊಳಲು, ಹಾಜಿ ಕೆ.ಉಸ್ಮಾನ್ ಉಚ್ಚಿಲ, ಇಬ್ರಾಹೀಂ ಐಡಿಯಲ್ ಮಜೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News