×
Ad

ಎಸ್ ಡಿ ಪಿ ಐ ಬಾಂಬಿಲ ವತಿಯಿಂದ 'ಕಾರ್ಯಕರ್ತರ, ಹಿತೈಷಿಗಳ ಸಮ್ಮಿಲನ' ಕಾರ್ಯಕ್ರಮ

Update: 2020-10-05 17:26 IST

ಬಂಟ್ವಾಳ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಾಂಬಿಲ ವತಿಯಿಂದ ಪಕ್ಷದ ಕಾರ್ಯಕರ್ತರ ಸಮ್ಮಿಲನ ಮತ್ತು ಪಕ್ಷಕ್ಕೆ ಹೊಸ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಬಾಂಬಿಲ‌ದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಕಾವಳಪಡೂರು ಅಧ್ಯಕ್ಷರಾದ ಅಬೂಬಕ್ಕರ್ ಮದ್ದ ವಹಿಸಿದ್ದರು.ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಫರಂಗಿಪೇಟೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸುಮಾರು 37  ಮಂದಿ ಪಕ್ಷದ ಸಿದ್ಧಾಂತವನ್ನು ಒಪ್ಪಿ ಸದಸ್ಯತ್ವವನ್ನು ಸ್ವೀಕರಿಸಿದರು.

ವೇದಿಕೆಯಲ್ಲಿ ಎಮ್‌.ಜೆ.ಎಮ್ ಬಾಂಬಿಲ‌ ಅದ್ಯಕ್ಷರಾದ ಅಬ್ದುಲ್ ಹಮೀದ್ ದೊಡ್ಡಮನೆ, ಸದಸ್ಯರಾದ ಅಬ್ದುಲ್ ಸಲಾಂ ಬಾಂಬಿಲ, ಸರಫುದ್ದೀನ್ ಗುಂಪಕಲ್ಲು, ಪಿ.ಎಫ್.ಐ ಅಗ್ರಹಾರ ವಲಯಾಧ್ಯಕ್ಷರಾದ ಅಬ್ದುಲ್ ರಝಾಕ್, ಸಮಾಜ ಸೇವಕರಾದ ಅಬ್ದುಲ್ ಹಮೀದ್ ಬಾಂಬಿಲ ಹಾಗೂ ಇತರ ನಾಯಕರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಎಸ್ ಡಿ ಪಿ ಐ ಸದಸ್ಯರಾದ ವಲಯಾಧ್ಯಕ್ಷರಾದ ನಕಾಶ್ ಬಾಂಬಿಲ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News