ಪಾಕ್ ವಿರುದ್ಧ ಪಿತೂರಿ: ನವಾಝ್, ಇತರ ನಾಯಕರ ವಿರುದ್ಧ ಮೊಕದ್ದಮೆ

Update: 2020-10-05 15:20 GMT

ಲಾಹೋರ್ (ಪಾಕಿಸ್ತಾನ), ಅ. 5: ದೇಶ ಮತ್ತು ರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ‘ಪಿತೂರಿ’ ಮಾಡಿರುವುದಕ್ಕಾಗಿ ಪಿಎಮ್‌ಎಲ್-ಎನ್ ಪಕ್ಷದ ನಾಯಕ ನವಾಝ್ ಶರೀಫ್ ಮತ್ತು ಪಕ್ಷದ ಇತರ ನಾಯಕರ ವಿರುದ್ಧ ಇಲ್ಲಿನ ಶಹ್ದಾರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣವೊಂದು ದಾಖಲಾಗಿದೆ.

ಮೊದಲ ಮಾಹಿತಿ ವರದಿ (ಎಫ್‌ಐಆರ್)ಯಲ್ಲಿ ಪಕ್ಷದ ನಾಯಕರಾದ ಮರ್ಯಮ್ ನವಾಝ್, ಅಹ್ಸಾನ್ ಇಕ್ಬಾಲ್, ರಾಣಾ ಸನಾವುಲ್ಲಾ, ಶಾಹಿದ್ ಖಾಖನ್ ಅಬ್ಬಾಸಿ, ಪರ್ವೇಝ್ ರಶೀದ್, ಮರಿಯಮ್ ಔರಂಗಝೇಬ್ ಮತ್ತು ಇತರರನ್ನು ನೇಮಿಸಲಾಗಿದೆ. ಪಕ್ಷದ ಕೇಂದ್ರೀಯ ಕಾರ್ಯಕಾರಿ ಸಮಿತಿ ಮತ್ತು ಕೇಂದ್ರೀಯ ಕ್ರಿಯಾ ಸಮಿತಿ ಸಭೆಗಳಲ್ಲಿ ಭಾಗವಹಿಸಿದ ನಾಯಕರನ್ನು ಮುಖ್ಯವಾಗಿ ಈ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.

ಸೆಪ್ಟಂಬರ್ 20 ಮತ್ತು ಅಕ್ಟೋಬರ್ 1ರಂದು ಮಾಡಿದ ಭಾಷಣಗಳಲ್ಲಿ ಶರೀಫ್ ‘‘ಭಾರತದ ನೀತಿಗಳನ್ನು ಬೆಂಬಲಿಸಿದ್ದಾರೆ’’ ಎಂದು ದೂರುದಾರ ಆರೋಪಿಸಿದ್ದಾರೆ. ‘‘ಆ ಮೂಲಕ ಪಾಕಿಸ್ತಾನವು ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ನ ‘ಬೂದು ಪಟ್ಟಿ’ಯಲ್ಲಿ ಮುಂದುವರಿಯುವಂತೆ ಮಾಡುವುದು ಅವರ ಉದ್ದೇಶವಾಗಿದೆ’’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News