ಕುಂದಾಪುರ: ಬೇಕಲ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮ
Update: 2020-10-06 13:14 IST
ಕುಂದಾಪುರ : ಎಸ್ ವೈ ಎಸ್ ಕುಂದಾಪುರ ಸೆಂಟರ್ ಮತ್ತು ಎಸ್ ವೈ ಎಸ್ ಇಸಾಬ ಹಾಗೂ ಎಸ್ಸೆಸ್ಸೆಫ್ ಕೋಡಿ ಸೆಕ್ಟರ್ ವತಿಯಿಂದ ಮುಹಿದ್ದೀನ್ ಜುಮಾ ಮಸೀದಿಯಲ್ಲಿ ಬೇಕಲ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮ ನಡೆಯಿತು.
ಮುಖ್ಯ ಪ್ರಭಾಷಣ ನಡೆಸಿದ ಅಶ್ರಫ್ ಸಖಾಫಿ ಕನ್ನಂಗಾರ್ ಉಡುಪಿ, ಚಿಕ್ಕಮಗಳೂರು, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮೊಹಲ್ಲಾಗಳ ಖಾಝಿಯೂ, ಉನ್ನತ ವಿದ್ವಾಂಸರೂ, ಶಿಕ್ಷಣ ಪ್ರೇಮಿಯೂ ಆಗಿದ್ದ ಬೇಕಲ್ ಉಸ್ತಾದರ ಅಗಲುವಿಕೆಯು ತುಂಬಲಾರದ ನಷ್ಟ ಎಂದರು.
ಯೂಸುಫ್ ಸಖಾಫಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು. ಅಬ್ದುರ್ರಹ್ಮಾನ್ ಸಖಾಫಿ ಎಂ ಕೋಡಿ ಅಧ್ಯಕ್ಷತೆ ವಹಿಸಿದರು. ಸಿದ್ದೀಖ್ ಸಖಾಫಿ ಹಂಗಳೂರು, ಹುಸೈನ್ ಕೆ ಎಚ್ ಪಡುಕೆರೆ, ಜಿ ಎಂ ಮುಸ್ತಫಾಕ, ಇಸ್ಮಾಯಿಲ್ ಸಖಾಫಿ ಕೋಟೆ ಕೋಡಿ ಮೊದಲಾದ ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಮಟ್ಟದ ಮೊಹಲ್ಲಾಗಳ ಅಧ್ಯಕ್ಷರು, ಕಾರ್ಯಕಾರಿ ಸದಸ್ಯರು ಹಾಗೂ ರೇಂಜ್ ಮದ್ರಸಾ ಅಧ್ಯಾಪಕರು ಹಾಗೂ ಎಸ್ ಎಂ ಎ ನೇತಾರರು ಉಪಸ್ಥಿತರಿದ್ದರು. ಅಮೀರ್ ಖಾನ್ ಅಹ್ಸನಿ ವಂದಿಸಿದರು.