×
Ad

ಪ್ರೊ. ಅಮೃತ ಸೋಮೇಶ್ವರರಿಗೆ ಡಾ.ಶಿವರಾಮ ಕಾರಂತ ಬಾಲವನ ಪ್ರಶಸ್ತಿ

Update: 2020-10-06 13:39 IST

ಮಂಗಳೂರು: ಪುತ್ತೂರಿನ ಶಿವರಾಮ ಕಾರಂತ ಬಾಲವನ ಕೊಡಮಾಡುವ 2020ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ, ಸಂಶೋಧಕ, ಪ್ರಸಂಗಕರ್ತ ಪ್ರೊ.ಅಮೃತ ಸೋಮೇಶ್ವರ ಅವರು ಆಯ್ಕೆಯಾಗಿದ್ದಾರೆ.

ಅ. 10ರಂದು ಮಧ್ಯಾಹ್ನ ಬಾಲವನದಲ್ಲಿ ನಡೆಯುವ ಡಾ.ಶಿವರಾಮ ಕಾರಂತರ ಜನ್ಮ ದಿನಾಚರಣೆಯಲ್ಲಿ  ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ  ಸೋಮೇಶ್ವರ ಅವರಿಗೆ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 25 ಸಾವಿರ ರೂ. ನಗದು, ಫಲಕ, ಪ್ರಮಾಣ ಪತ್ರ, ಶಾಲು, ಹಾರಗಳನ್ನು ಒಳಗೊಂಡಿದೆ ಎಂದು ಪುತ್ತೂರು ಬಾಲವನದ ಆಡಳಿತಾಧಿಕಾರಿ ಡಾ.ಸುಂದರ ಕೇನಾಜೆ ತಿಳಿಸಿದ್ದಾರೆ.

ಸುಳ್ಯದ ಕುರುಂಜಿ ವೆಂಕಟರಮಣ ಗೌಡ ದತ್ತಿನಿಧಿ ಮೂಲಕ ಬಾಲವನವು ಕಾರಂತರ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News