ಅಡ್ಡೂರಿನ ನೂತನ ರಿಕ್ಷಾ ನಿಲ್ದಾಣ ಉದ್ಘಾಟನೆ
ಗುರುಪುರ, ಅ.6: ಕಾರ್ಮಿಕ ವರ್ಗಕ್ಕೆ ಉತ್ತಮ ಸೌಲಭ್ಯ ನೀಡುವುದು ಸರಕಾರದ ಆದ್ಯತೆಯಾಗಿದೆ. ಸರಕಾರಿ ನೌಕರರಂತೆ ಕಾರ್ಮಿಕರಿಗೂ ಗೌರವವಿದೆ. ಅವರನ್ನು ಅವಗಣಿಸುವಂತಿಲ್ಲ. ರಿಕ್ಷಾ, ಟ್ಯಾಕ್ಸಿ ಚಾಲಕರು ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಉತ್ತಮ ಸೇವೆ ಒದಗಿಸಬೇಕು ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಐವನ್ ಡಿಸೋಜ ಹೇಳಿದರು.
ಗುರುಪುರ ಗ್ರಾಪಂ ವ್ಯಾಪ್ತಿಯ ಅಡ್ಡೂರು ಜಂಕ್ಷನ್‌ನಲ್ಲಿ ತನ್ನ ಶಾಸಕರ ನಿಧಿಯ ಎರಡು ಲಕ್ಷ ರೂ. ಅನುದಾನದಲ್ಲಿ ಹೊಸದಾಗಿ ನಿರ್ಮಿಸಲಾದ ರಿಕ್ಷಾ ತಂಗುದಾಣ ಮತ್ತು ಇಂಟರ್‌ಲಾಕ್ ಅಳವಡಿಕೆ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭ ಮಾಜಿ ಶಾಸಕ ಮೊಯ್ದಿನ್ ಬಾವ, ಜಿಪಂ ಸದಸ್ಯ ಯುಪಿ ಇಬ್ರಾಹಿಂ, ತಾಪಂ ಸದಸ್ಯರಾದ ಸಚಿನ್ ಅಡಪ ಮತ್ತು ಸುನಿಲ್ ಜಿ, ಬದ್ರಿಯಾ ಜುಮ್ಮಾ ಮಸೀದಿ ಉಪಾಧ್ಯಕ್ಷ ಜೈನುದ್ಧೀನ್, ಹಸನ್ ಬಾವ, ಮುಹಮ್ಮದ್ ಸಲೀಂ (ಗುತ್ತಿಗೆದಾರ), ಎ.ಕೆ. ಮುಹಮ್ಮದ್, ಅಹ್ಮದ್ ಬಾವ, ರುಕಿಯಾ, ಪುರುಷೋತ್ತಮ ಮಲ್ಲಿ, ಹರೀಶ್ ಭಂಡಾರಿ ಉಪಸ್ಥಿತರಿದ್ದರು.
ಗುರುಪುರ ಗ್ರಾಪಂ ಮಾಜಿ ಸದಸ್ಯೆ ಜಯಲಕ್ಷ್ಮಿ ಸ್ವಾಗತಿಸಿದರು. ಅಡ್ಡೂರು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಜಲೀಲ್ ವಂದಿಸಿದರು.