ಸಿಬಿಐ ದಾಳಿ : ದ.ಕ.ಜಿಲ್ಲಾ ಕಾಂಗ್ರೆಸ್ ಖಂಡನೆ
Update: 2020-10-06 18:04 IST
ಮಂಗಳೂರು, ಅ.6: ಕೆಪಿಸಿಸಿ ಡಿ.ಕೆ.ಶಿವಕುಮಾರ್‌ರ ಮನೆ ಮೇಲೆ ಸಿಬಿಐ ಮೂಲಕ ಮಾಡಿದ ದಾಳಿಗೆ ಕೇಂದ್ರ ಸರಕಾರ ಪ್ರಚೋದನೆಯೇ ಕಾರಣ. ಮುಂದಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಡಿಕೆಶಿ ನೇತೃತ್ವದಲ್ಲಿ ಗೆಲುವು ಕಾಣಲಿದೆ. ಇದನ್ನು ಅರಿತ ಕೇಂದ್ರದ ಬಿಜೆಪಿ ಸಿಬಿಐಯನ್ನು ಛೂ ಬಿಟ್ಟು ದಾಳಿ ನಡೆಸಿದೆ. ಇದು ಖಂಡನೀಯ ಎಂದು ಡಿಸಿಸಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡಿಕೆಶಿ ಅವರ ಮನೋಸ್ಥೈರ್ಯವನ್ನು ಕುಗ್ಗಿಸುವಂತಹ ಕುತಂತ್ರಕ್ಕೆ ಬಿಜೆಪಿ ಪ್ರಯತ್ನಿಸುತ್ತಿದೆ. ಯಾವುದೋ ಹಳೆಯ ದಾವೆಯನ್ನು ಮುಂದಿಟ್ಟು ಕೊಂಡು ಚುನಾವಣೆಯ ಸಂದರ್ಭ ಕೀಟಲೆ ನೀಡುವುದು ಅಮಿತ್ ಷಾ, ಮೋದಿಗೆ ಹವ್ಯಾಸವಾಗಿ ಬಿಟ್ಟಿದೆ. ಬಿಬಿಎಂಪಿ ವಸತಿ ಯೋಜನೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪಕುಟುಂಬ ಅವ್ಯವಹಾರ ನಡೆಸಿದೆ. ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದೆ. ಆದರೆ ಸಿಬಿಐ ಕಣ್ಣು ಮುಚ್ಚಿ ಕುಳಿತಿ ರುವುದು ವಿಪರ್ಯಾಸ ಎಂದು ತಿಳಿಸಿದ್ದಾರೆ