×
Ad

ಜೆಇಇ ಅಡ್ವಾನ್ಸ್ 2020 : ಆಳ್ವಾಸ್ ಉತ್ತಮ ಸಾಧನೆ

Update: 2020-10-06 19:59 IST

ಮೂಡುಬಿದಿರೆ : ದೇಶದ ಪ್ರತಿಷ್ಠಿತ ಐಐಟಿ, ಇಂಜಿನಿಯರಿಂಗ್ ಕಾಲೇಜುಗಳು ಪ್ರವೇಶಕ್ಕೆ ನಡೆದ ಅಖಿಲ ಭಾರತ ಮಟ್ಟದ ಈ ಬಾರಿಯ ಜೆಇಇ ಅಡ್ವಾನ್ಸ್ – 2020 ಪರೀಕ್ಷೆಯಲ್ಲಿ ಮೂಡಬಿದ್ರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸುಹಾಸ್ ಸಿ 102ನೇ ರ್ಯಾಂಕ್ ಮತ್ತು ಸುದೀಪ್ ಹನುಮಂತ ಕಮರೆಡ್ಡಿ 113ನೇ ರ್ಯಾಂಕ್ ಎಸ್‍ಟಿ ವಿಭಾಗದಲ್ಲಿ ಪಡೆದಿರುತ್ತಾರೆ.

ಎಸ್‍ಸಿ ವಿಭಾಗದಲ್ಲಿ ವಿಷ್ಣು ವಿ 1121ನೇ ರ್ಯಾಂಕ್, ರಾಘವೇಂದ್ರ ಪಾಂಡುರಂಗ ಜಾಧವ 1960ನೇ ರ್ಯಾಂಕ್, ಬಿ.ಕೆ ಕಿಶನ್ 2656ನೇ ರ್ಯಾಂಕ್, ಶಶಾಂಕ್ ಸುಂದರ್ ಬಿ. 4422ನೇ ರ್ಯಾಂಕ್, ಗಳಿಸುರುತ್ತಾರೆ. ಒ.ಬಿ.ಸಿ ವಿಭಾಗದಲ್ಲಿ ಸಾಯಿಕೀರ್ತಿ ಎಸ್ ಆರ್ 4150ನೇ ರ್ಯಾಂಕ್ ಅಮೋಘ್ ಪ್ರಭು 4655ನೇ ರ್ಯಾಂಕ್ , ಆಕಾಶ್ ಮೃತ್ಯುಂಜಯ  ಹಾರೊಗೇರಿ 5575ನೇ ರ್ಯಾಂಕ್ , ಭಾರ್ಗವ ಎಂ 5767ನೇ ರ್ಯಾಂಕ್, ಗುರುಕಿರಣ ಜಿ.ಕೆ 7846ನೇ ರ್ಯಾಂಕ್, ಹರ್ಷ ಅಮ್ಮಲಚೇರಿ 6425ನೇ ರ್ಯಾಂಕ್, ಪಡೆದುಕೊಂಡಿದ್ದಾರೆ. ಹರ್ಷ ವಿ 9823ನೇ ರ್ಯಾಂಕ್, ಪಿ ಎಸ್ ರವೀಂದ್ರ 13,011ನೇ ರ್ಯಾಂಕ್‍ನ್ನು ಜನರಲ್ ವಿಭಾಗದಲ್ಲಿ ಪಡೆದುಕೊಂಡಿದ್ದಾರೆ.  ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವಾರು ಅಭಿನಂದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News