×
Ad

ಕುದ್ರೋಳಿ: ಎಸ್‌ಐಒ-ಜಿಐಒ ಧರಣಿ

Update: 2020-10-07 19:45 IST

ಮಂಗಳೂರು, ಅ.7: ಹತ್ರಸ್‌ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ ಎಸ್‌ಐಒ ಹಾಗೂ ಜಿಐಒ ಕುದ್ರೋಳಿ ಘಟಕದ ವತಿಯಿಂದ ಮಂಗಳವಾರ ರಾತ್ರಿ ಧರಣಿ ನಡೆಯಿತು.

ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ರಾಜ್ಯಾಧ್ಯಕ್ಷೆ ಉಮೈರಾ ಬಾನು ಮಾತನಾಡಿ ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದ ಬರ್ಬರ ಕೃತ್ಯದಲ್ಲಿ ಯುಪಿ ಸರಕಾರ ನಡೆದುಕೊಂಡ ರೀತಿಯು ಅತ್ಯಾಚಾರದ ಮೇಲೆ ಅತ್ಯಾಚಾರವಾಗಿದೆ. ಇದು ಸಾವಲ್ಲ,ಸರಕಾರದಿಂದ ನಡೆದ ಕೊಲೆಯಾಗಿದೆ ಎಂದು ಆರೋಪಿಸಿದರು.

ಕಾರ್ಪೊರೇಟರ್ ಶಂಸುದ್ದೀನ್, ಕಾನೂನು ವಿದ್ಯಾರ್ಥಿ ನಿಹಾಲ್ ಮುಹಮ್ಮದ್ ಮಾತನಡಿದರು. ಎಚ್‌ಅರ್‌ಎಸ್ ಮುಖಂಡ ಅಮೀರ್ ಕುದ್ರೋಳಿ, ಎಸ್‌ಐಒ, ಜಿಐಒ ಹಾಗೂ ಜೆಐಎಚ್ ಮಹಿಳಾ ವಿಭಾಗದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News