ಕಲ್ಲಾಪು: ಎಸ್‌ಡಿಪಿಐ ಕಚೇರಿ ಉದ್ಘಾಟನೆ
ಮಂಗಳೂರು, ಅ.7: ಎಸ್‌ಡಿಪಿಐ ಕಲ್ಲಾಪು ಘಟಕದ ಕಚೇರಿ ಮತ್ತು ಮಾಹಿತಿ, ಸೇವಾ ಕೇಂದ್ರವನ್ನು ಇತ್ತೀಚೆಗೆ ಎಸ್‌ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಬ್ಬಾಸ್ ಕಿನ್ಯ ಉದ್ಘಾಟಿಸಿದರು.
ಅಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನ ರಾಜ್ಯ ಸಮಿತಿ ಸದಸ್ಯ ರಫೀಕ್ ದಾರಿಮಿ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ದಿಕ್ಸೂಚಿ ಭಾಷಣಗೈದರು. ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಕ್ಷೇತ್ರ ಕಾರ್ಯದರ್ಶಿ ಅಬ್ದುಲ್ಲತೀಫ್ ಕೋಡಿಜಾಲ್, ಪಿಎಫ್‌ಐ ವಲಯ ಅಧ್ಯಕ್ಷ ತಂಝಿಲ್ ಉಳ್ಳಾಲ, ಕುರಾನಿಕ್ ಸ್ಟಡೀಸ್ ಕೆ.ಸಿ.ರೋಡ್ ಇದರ ಪ್ರಾಧ್ಯಾಪಕ ಸುಲೈಮಾನ್, ಎಸ್‌ವೈಎಸ್ ಕಲ್ಲಾಪು ಶಾಖಾಧ್ಯಕ್ಷ ಮೊಯ್ದಿನ್, ಕಲ್ಲಾಪು ಎಂಎಫ್‌ಸಿ ಸ್ಫೋರ್ಟ್ಸ್ ಕ್ಲಬ್ ನ ಸಲಹೆಗಾರ ಅಬ್ದುಲ್ ಹಮೀದ್, ಕಲ್ಲಾಪು ಉರ್ದು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸದ್ದಾಮ್ ಕಲ್ಲಾಪು, ಪಿಎಫ್‌ಐ ಉಳ್ಳಾಲ ವಲಯಾಧ್ಯಕ್ಷ ಸಿದ್ದೀಕ್ ಯು.ಬಿ ಉಪಸ್ಥಿತರಿದರು.
ಝಾಕಿರ್ ಉಳ್ಳಾಲ್ ಸ್ವಾಗತಿಸಿದರು. ಮುಹಮ್ಮದ್ ಕಲ್ಲಾಪು ವಂದಿಸದರು. ಸಿದ್ದೀಕ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.