ಬಾಬರಿ ಮಸೀದಿ ಧ್ವಂಸ ಪ್ರಕರಣದ ಕೋರ್ಟ್ ತೀರ್ಪು ಖೇದಕರ: ಸಮಸ್ತ
ಮಂಗಳೂರು, ಅ.7: ಬಾಬರಿ ಮಸೀದಿ ದ್ವಂಸ ಪ್ರಕರಣದ ಕೇಸಿನಲ್ಲಿ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಜಾತ್ಯತೀತ ಭಾರತದ ಆತ್ಮಕ್ಕೆ ಬಿದ್ದ ಅವಳಿ ಪ್ರಹಾರವಾಗಿದೆ ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರ ಅಭಿಪ್ರಾಯಪಟ್ಟಿದೆ.
ಮಸೀದಿಯ ಸ್ಥಳದಲ್ಲಿ ಕ್ಷೇತ್ರ ನಿರ್ಮಾಣಕ್ಕೆ ಅವಕಾಶವನ್ನು ನೀಡಿದಾಗಲೇ ಜಾತ್ಯತೀತ ಭಾರತೀಯ ಮನಸ್ಸುಗಳಿಗೆ ತೀವ್ರ ನೋವನ್ನುಂಟು ಮಾಡಿತ್ತು. ಇದೀಗ ಮಸೀದಿ ದ್ವಂಸಕ್ಕೆ ಕಾರಣಕರ್ತರೆಂದು ಆರೋಪಿಸಲಾದ 32 ಮಂದಿಯನ್ನೂ ಆರೋಪ ಮುಕ್ತಗೊಳಿಸಿ ಖುಲಾಸೆ ಗೊಳಿಸಿರುವುದು ಜಾತ್ಯತೀತ ಭಾರತಕ್ಕೆ ತೀರಾ ಕಳಂಕ ಮತ್ತು ಖೇದಕರ ಎಂದು ಸಮಸ್ತ ಕರ್ನಾಟಕ ಮುಶಾವರ ತಿಳಿಸಿದೆ.
ಮಂಗಳೂರಿನ ಖಾಝಿಯಾಗಿದ್ದ ಶೈಖುನಾ ಉಸ್ತಾದ್ ಕೋಟ ಅಬ್ದುಲ್ ಖಾದಿರ್ ಮುಸ್ಲಿಯಾರ್‌ರ ಸ್ಮರಣಾರ್ಥ ಸಮಸ್ತ ಕರ್ನಾಟಕ ಮುಶಾವರದ ವತಿಯಿಂದ ದ.ಕ .ಜಿಲ್ಲೆಯಲ್ಲಿ ಸಮಸ್ತಾಲಯವನ್ನು ನಿರ್ಮಾಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಮಸ್ತ ಕರ್ನಾಟಕ ಮುಶಾವರದ ಕಾರ್ಯಾಧ್ಯಕ್ಷ ಅಲ್ಹಾಜ್ ಇಬ್ರಾಹಿಂ ಬಾಖವಿ ಕೆ.ಸಿ. ರೋಡು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಲ್ಹಾಜ್ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಸಭೆಯನ್ನು ಉದ್ಘಾಟಿಸಿದರು. ಕೋಶಾಧಿಕಾರಿ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ಅವರು ಇತ್ತೀಚೆಗೆ ಅಗಲಿದ ಸಮಸ್ತ ಉಲಮಾ ಉಮರಾ ನೇತಾರರ ಅನುಸ್ಮರಣೆ ಮಾಡಿ ದುಆ ನೆರವೇರಿಸಿದರು.
ಉಪಾಧ್ಯಕ್ಷ ಉಸ್ಮಾನ್ ಫೈಝಿ ಉಳ್ಳಾಲ, ಸಂಘಟನಾ ಕಾರ್ಯದರ್ಶಿ ಅಲ್ಹಾಜ್ ಕೆ.ಪಿ.ಎಂ ಶರೀಫ್ ಫೈಝಿ ಕಡಬ, ಸದಸ್ಯರಾದ ಆದಂ ದಾರಿಮಿ ಅಜ್ಜಿಕಟ್ಟೆ, ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಇಸ್ಮಾಯಿಲ್ ಫೈಝಿ ಸೂರಿಂಜೆ, ಅಹ್ಮದ್ ದಾರಿಮಿ ಕಂಬಳಬೆಟ್ಟು, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಉಸ್ಮಾನ್ ದಾರಿಮಿ ಬಂಟ್ವಾಳ, ಅಬ್ದುಲ್ ಹಮೀದ್ ದಾರಿಮಿ ಪೆರ್ನೆ, ಖಾಸಿಂ ದಾರಿಮಿ ತೋಡಾರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ಐ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ವಂದಿಸಿದರು.