ಐಎಂಎ ಉಡುಪಿ ಕರಾವಳಿ ಶಾಖೆ ಅಧ್ಯಕ್ಷರಾಗಿ ಡಾ.ಉಮೇಶ್ ಪ್ರಭು
Update: 2020-10-07 21:29 IST
ಉಡುಪಿ, ಅ.7: ಭಾರತೀಯ ವೈದ್ಯಕೀಯ ಸಂಘ(ಐಎಂಎ) ಉಡುಪಿ ಕರಾವಳಿ ಶಾಖೆಯ 2020-21ನೆ ಸಾಲಿನ ಅಧ್ಯಕ್ಷರಾಗಿ ಡಾ.ಉಮೇಶ್ ಪ್ರಭು ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ.
ಅದೇ ರೀತಿ ಸರ್ವಸದಸ್ಯರು ಹಾಗೂ ಕಾರ್ಯಕಾರಿ ಸಮಿತಿಯು ಕೂಡ ಮುಂದುವರೆಯಲಿದೆ. ಮುಂದಿನ ವರ್ಷದಲ್ಲಿಯೂ ಸಂಘ ಜನ ಸ್ನೇಹಿ ಹಾಗೂ ವೈದ್ಯಸ್ನೇಹಿಯಾಗಿ ಕೆಲಸ ಮಾಡಲಿದೆ ಎಂದು ಕಾರ್ಯದರ್ಶಿ ಡಾ.ಪ್ರಕಾಶ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.