×
Ad

‘ಸಾಗರ ಕವಚ’ ಅಣಕು ಕಾರ್ಯಾಚರಣೆ: ಉಡುಪಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ

Update: 2020-10-07 21:39 IST

ಉಡುಪಿ ಅ.6: ಜಿಲ್ಲಾಡಳಿತ, ಕರಾವಳಿ ಕಾವಲು ಪಡೆ, ಪೋಲಿಸ್ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸಲಾದ ಸಾಗರ ಕವಚ ಅಣಕು ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸ ಲಾಗಿತ್ತು. ಆದರೆ ಎಲ್ಲೂ ಕೂಡ ಅಣಕು ಕಾರ್ಯಾಚಣೆ ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಈ ಅಣಕು ಪ್ರದರ್ಶನ ಸಾರ್ವಜನಿಕ ಸ್ಥಳಗಳಾದ ಪ್ರಾರ್ಥನಾ ಮಂದಿರ, ಪ್ರತಿಷ್ಟಿತ ಶಾಲೆ/ಕಾಲೇಜುಗಳಲ್ಲಿ ರೈಲು ನಿಲ್ಡಾಣ, ಬಸ್ ನಿಲ್ಡಾಣ, ಬೀಚ್, ಬಂದರು, ಶಾಪಿಂಗ್ ಕಾಂಪ್ಲೆಕ್ಸ್, ಕಡಲ ಕಿನಾರೆಗಳಲ್ಲಿ, ರಸ್ತೆ ಸೇರಿದಂತೆ ಇತರೆ ಪ್ರಮುಖ ಸ್ಥಳಗಳಲ್ಲಿ ನಡೆಯುವುದರಿಂದ ಪೊಲೀಸ್ ಇಲಾಖೆ ಮತ್ತು ಕರಾವಳಿ ಕವಾಲು ಪಡೆಯ ಪೊಲೀಸರು ಇದನ್ನು ಎದುರಿಸಲು ಸನ್ನದ್ಧರಾಗಿದ್ದರು.

ಆಯಕಟ್ಟಿನ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. ಆದರೆ ಮೊದಲ ದಿನ ಜಿಲ್ಲೆಯ ಯಾವ ಭಾಗದಲ್ಲೂ ಯಾವುದೇ ರೀತಿಯ ಕಾರ್ಯಾಚರಣೆ ನಡೆದಿಲ್ಲ. ಅ.8ರಂದು ಕೂಡ ಈ ಕಾರ್ಯಾಚರಣೆ ಮುಂದುವರೆಯಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಎಸ್ಪಿ ವಿಷ್ಣುವರ್ಧನ್  ತಿಳಿಸಿದ್ದಾರೆ.

ಬಂದರುಗಳಲ್ಲಿರುವ ಬೋಟುಗಳನ್ನು ಪರಿಶೀಲನೆ ನಡೆಸಲಾಗಿದೆ. ಬೀಚ್ ಸೇರಿದಂತೆ ಸಮುದ್ರ ತೀರದಲ್ಲಿ ನಿಗಾ ವಹಿಸಲಾಗಿದೆ. ಆದರೆ ಎಲ್ಲೂ ಯಾವುದೇ ಅಣಕು ಕಾರ್ಯಾಚರಣೆ ಕಂಡುಬಂದಿಲ್ಲ ಎಂದು ಕರಾವಳಿ ಕಾವಲು ಪಡೆಯ ಎಸ್ಪಿ ಆರ್.ಚೇತನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News