×
Ad

ಯುನಿವೆಫ್ : 'ಮೌಲಾನಾ ಅಬುಲ್ ಕಲಾಂ ಅಝಾದ್, ಸರ್ ಅಲ್ಲಾಮಾ ಇಕ್ಬಾಲ್' ಪ್ರಬಂಧ ಸ್ಪರ್ಧೆ

Update: 2020-10-07 22:25 IST

ಮಂಗಳೂರು : ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಜಿಲ್ಲೆಯ ಬಡ ಮುಸ್ಲಿಮ್ ವಿದ್ಯಾರ್ಥಿಗಳಿಗೆ  ಯುನಿವೆಫ಼್ ಎಜುಕೇಶನ್ ಫೋರಂ ಪ್ರತಿ ವರ್ಷ ಮೌಲಾನಾ ಅಬುಲ್ ಕಲಾಂ ಅಝಾದ್ ಮತ್ತು ಸರ್ ಅಲ್ಲಾಮಾ ಇಕ್ಬಾಲ್ ಪ್ರಶಸ್ತಿಯನ್ನು ನೀಡುತ್ತಿದೆ. ಈ ಪ್ರಶಸ್ತಿಯ ಹಿನ್ನೆಲೆಯಲ್ಲಿ ಮೌಲಾನಾ ಅಬುಲ್ ಕಲಾಂ ಅಝಾದ್ ಮತ್ತು ಸರ್ ಅಲ್ಲಾಮಾ ಇಕ್ಬಾಲ್ ಎಂಬ ಮಹಾನ್ ವ್ಯಕ್ತಿತ್ವಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

"ನವಯುಗದ ಮಾದರಿ ರಾಜಕಾರಿಣಿ ಮೌಲಾನಾ ಅಬುಲ್ ಕಲಾಮ್ ಆಝಾದ್" ಮತ್ತು "ನಾಗರಿಕ ಸಮಾಜ ನಿರ್ಮಾಣ ಮತ್ತು ಅಲ್ಲಾಮಾ ಇಕ್ಬಾಲ್" ಎಂಬ ಎರಡು ವಿಷಯಗಳಲ್ಲಿ ವಿದ್ಯಾರ್ಥಿಗಳಿಂದ ಪ್ರತ್ಯೇಕ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.

ನಿಯಮಗಳು: 1. ಪ್ರಬಂಧ ಕನ್ನಡ ಭಾಷೆಯಲ್ಲಾಗಿರಬೇಕು. ಎರಡು ವಿಷಯಗಳಿಗೆ ಪ್ರತ್ಯೇಕ ಪ್ರಬಂಧ ಬರೆಯಬೇಕು. ಒಬ್ಬರು ಒಂದೇ ವಿಷಯ ದಲ್ಲೂ ಭಾಗವಹಿಸಬಹುದು. 2. A4 ಕಾಗದದ ಒಂದೇ ಮಗ್ಗುಲಲ್ಲಿ 4 ಪುಟಗಳಿಗೆ ಮೀರದಂತೆ ಬರೆಯಬೇಕು. 3. ಹೆಸರು, ಪೂರ್ಣ ವಿಳಾಸ, ಫೋಟೊ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿರಬೇಕು. 4. ಪ್ರಬಂಧ ಸ್ವೀಕರಿಸಲು ಅ.20 ಕೊನೆಯ ದಿನಾಂಕ. ಅದರ ನಂತರ ಬಂದ ಪ್ರಬಂಧಗಳನ್ನು ಸ್ವೀಕರಿಸಲಾಗುವುದಿಲ್ಲ. 5. ಪ್ರಬಂಧವನ್ನು ಮರುಪ್ರಕಟಿಸುವ ಹಕ್ಕು ಯುನಿವೆಫ್ ಕರ್ನಾಟಕದ್ದಾಗಿರುತ್ತದೆ.(ಅನುಮತಿ ವಿನಃ). 6. ತೀರ್ಪುಗಾರರ ನಿರ್ಣಯವೇ ಅಂತಿಮ ಮತ್ತು ಯಾವುದೇ ಶಿಫಾರಸ್ಸನ್ನು ಪರಿಗಣಿಸಲಾಗುವುದಿಲ್ಲ. 7. ಎರಡು ವಿಷಯಗಳಿಗೂ ಅನುಕ್ರಮ ವಾಗಿ ಪ್ರಥಮ ಬಹುಮಾನ 3000 ರೂ. ಮತ್ತು ದ್ವಿತೀಯ ಬಹುಮಾನ 2000 ರೂ. 8. ಮೆಚ್ಚುಗೆ ಪಡೆದ ಪ್ರಬಂಧಗಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು. 9. ಬಹುಮಾನವನ್ನು ಮೌಲಾನಾ ಅಬುಲ್ ಕಲಾಂ ಆಝಾದ್ ಮತ್ತು ಸರ್ ಅಲ್ಲಾಮಾ ಇಕ್ಬಾಲ್ ಪ್ರಶಸ್ತಿ ಪ್ರದಾನ ಸಮಾರಂಭದಂದು ವಿತರಿಸಲಾಗುವುದು. 10. ಪ್ರಬಂಧವನ್ನು ಸಾಮಾನ್ಯ ಅಂಚೆಯಲ್ಲಿ ಕಳುಹಿಸಬೇಕು. ಸ್ಪೀಡ್ ಪೋಸ್ಟ್, ರಿಜಿಸ್ಟರ್ಡ್ ಮತ್ತು ಕೊರಿಯರ್ ನಲ್ಲಿ ಬಂದ ಅಂಚೆಗಳನ್ನು ಸ್ವೀಕರಿಸಲಾಗುವುದಿಲ್ಲ.

ಪ್ರಬಂಧ ಕಳುಹಿಸಬೇಕಾದ ವಿಳಾಸ:

ಎಜುಕೇಶನ್ ಫೋರಂ ಪ್ರಬಂಧ ಸ್ಪರ್ಧಾ ವಿಭಾಗ
ಪೋಸ್ಟ್ ಬಾಕ್ಸ್ ಸಂಖ್ಯೆ 579,
ಕಂಕನಾಡಿ ಪೋಸ್ಟ್ ಆಫೀಸ್, ಮಂಗಳೂರು -575 002
ಸಂಪರ್ಕ ಸಂಖ್ಯೆ :ಯು.ಕೆ. ಖಾಲಿದ್ +91 98451 99931

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News