×
Ad

ಹತ್ರಸ್ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ: ರಮಾನಾಥ ರೈ

Update: 2020-10-07 22:35 IST

ಬಂಟ್ವಾಳ, ಅ. 7: ಹತ್ರಸ್ ನಲ್ಲಿ ಅತ್ಯಾಚಾರ ಘಟನೆ ಅತ್ಯಂತ ಹೇಯ ಕೃತ್ಯವಾಗಿದ್ದು ಮುಂದೆಂದೂ ಇಂಥ ಘಟನೆ ನಡೆಯದಂತೆ ಆರೋಪಿ ಗಳಿಗೆ ಕಠಿಣ ಶಿಕ್ಷೆ ನೀಡಿ ಯುವತಿಯ ಪರ ನ್ಯಾಯ ದೊರಕಿಸಿಕೊಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಘಟನೆ ಖಂಡಿಸಿ, ಬಂಟ್ವಾಳ ಮಿನಿ ವಿಧಾನ ಸೌಧ ಮುಂಭಾಗ ಅಂಬೇಡ್ಕರ್ ಯುವ ವೇದಿಕೆ ಹಾಗೂ ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾ ವಿ‌. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಂತಿ ವಿ‌. ಪೂಜಾರಿ, ಪ್ರಮುಖರಾದ ಚಿತ್ತರಂಜನ ಶೆಟ್ಟಿ ಬೊಂಡಾಲ, ಪದ್ಮನಾಭ ರೈ, ಪದ್ಮನಾಭ ನರಿಂಗಾನ, ಪುರಸಭಾ ಸದಸ್ಯ ಜನಾರ್ದನ್ ಚಂಡ್ತಿಮಾರ್, ಬುಡ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಬಂಟ್ವಾಳ ಎನ್.ಎಸ್.ಯು.ಐ‌. ಅಧ್ಯಕ್ಷ ವಿನಯ್ ಕುಮಾರ್, ಪ್ರಮುಖರಾದ ಉಮೇಶ್ ಆಮ್ಟೂರು, ಪ್ರೇಮ್ ಪಲ್ಲಮಜಲು, ಪ್ರವೀಣ್ ಸೂರ್ಯ ಹೊಸಂಗಡಿ, ಸತೀಶ್ ಅರಳ, ಸಂದೇಶ್ ಅರಳ, ರಕ್ಷಿತ್ ಸರಪಾಡಿ, ಕಿರಣ್ ಪಲ್ಲಮಜಲು, ಜನಾರ್ದನ ಕಕ್ಕೆಪದವು, ಪುಷ್ಪರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News