ಹರ್ಯಾಣ: ಉದ್ಯಮಿಯ ದರೋಡೆಗೈದು ಕಾರಿನೊಳಗೆ ಕೂಡಿಹಾಕಿ ಬೆಂಕಿಹಚ್ಚಿದ ದುಷ್ಕರ್ಮಿಗಳು
ಹಿಸಾರ್(ಹರ್ಯಾಣ): ಹರ್ಯಾಣದ ಹಿಸಾರ್ ಜಿಲ್ಲೆಯಲ್ಲಿ ಬುಧವಾರ ಉದ್ಯಮಿಯೊಬ್ಬನಿಂದ 11 ಲಕ್ಷ ರೂ. ಲೂಟಿಗೈದ ಕೆಲವು ಅಪರಿಚಿತ ದುಷ್ಕರ್ಮಿಗಳು ಬಳಿಕ ಕಾರಿನೊಳಗೆ ಲಾಕ್ ಮಾಡಿ ಬೆಂಕಿ ಹಚ್ಚಿದ ಭೀಕರ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
35 ವಯಸ್ಸಿನ ಉದ್ಯಮಿಯ ಲೂಟಿಗೈದು, ಕೊಲೆಗೈದ ಘಟನೆಯು ಮಂಗಳವಾರ ರಾತ್ರಿ ಹನ್ಸಿ ಪ್ರದೇಶದಲ್ಲಿ ನಡೆದಿದೆ. ಭಾಟ್ಲಾ-ಡಾಟಾ ಹಳ್ಳಿಯ ನಿವಾಸಿಯಾಗಿರುವ ರಾಮ್ ಮೆಹಾರ್ ಮನೆಗೆ ವಾಪಸಾಗುತ್ತಿದ್ದಾಗ ದರೋಡೆಕೋರು ಅವರನ್ನು ತಡೆದರು. ಬಳಿಕ ಉದ್ಯಮಿಯಿಂದ ಹಣ ಲೂಟಿ ಹೊಡೆದು ಕಾರಿನೊಳಗೆ ಕೂಡಿ ಹಾಕಿ ಲಾಕ್ ಮಾಡಿದ್ದಾರೆ. ಬಳಿಕ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಲಭಿಸಿದ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿದಾಗ ಮೆಹರ್ ವಾಹನದೊಳಗೆ ಸುಟ್ಟ ಕರಕಲಾಗಿದ್ದರು. ಮೆಹಾರ್ ಸಂಬಂಧಿಕರಿಗೆ ಕರೆ ಮಾಡಿದಾಗ ಅವರು ಕಾರಿನ ನಂಬರ್‌ನ ಮೂಲಕ ಗುರುತು ಪತ್ತೆ ಹಚ್ಚಿದರು. ಬರ್ವಾಲದಲ್ಲಿ ಉದ್ಯಮಿಯಾಗಿದ್ದ ಮೆಹಾರ್, ಬ್ಯಾಂಕ್‌ನಲ್ಲಿ 11 ಲಕ್ಷ ರೂ. ಪಡೆದು ಮನೆಗೆ ವಾಪಸಾಗುತ್ತಿದ್ದರು ಎಂದು ಮೃತ ವ್ಯಕ್ತಿಯ ಕುಟುಂಬದವರು ಪೊಲೀಸರಿಗೆ ತಿಳಿಸಿದರು.