×
Ad

ಮನಪಾ ಸ್ಮಾರ್ಟ್ ಸಿಟಿ ಯೋಜನೆ, ವೆಚ್ಚಗಳ ಬಗ್ಗೆ ಲೋಕಾಯುಕ್ತ ತನಿಖೆಗೆ ಆಗ್ರಹ : ಐವನ್ ಡಿಸೋಜ

Update: 2020-10-08 15:26 IST

ಮಂಗಳೂರು, ಅ. 8: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಸ್ಮಾರ್ಟ್ ಸಿಟಿ ಯೋಜನೆ ಎರಡು ವರ್ಷ ಕಳೆದರೂ ವ್ಯವಸ್ಥಿತವಾಗಿ ಜಾರಿಯಾಗುತ್ತಿಲ್ಲ. ಜೊತೆಗೆ ಈ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮತ್ತು ಯೋಜನಾ ತಯಾರಿ ಸಂದರ್ಭ  ವೆಚ್ಚ ವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಸ್ಮಾರ್ಟ್ ಸಿಟಿಯ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಗುಮಾನಿ ಇದೆ ಈ ಹಿನ್ನಲೆಯಲ್ಲಿ ಈ ಯೋಜನೆಯ ವೆಚ್ಚಗಳ ಬಗ್ಗೆ ಲೋಕಾಯುಕ್ತ ಅಥವಾ ಎಸಿಬಿ ತನಿಖೆ ನಡೆಸಬೇಕೆಂದು ಸರಕಾರವನ್ನು ಆಗ್ರಹಿಸುವುದಾಗಿ ಮಾಜಿ ಸರಕಾರಿ ಮುಖ್ಯ ಸಚೇತಕರು ಹಾಗೂ ಕೆಪಿಸಿಸಿ ವಕ್ತಾರರು, ಮಾಜಿ ವಿಧಾನ ಪರಿಷತ್ ಶಾಸಕರಾದ  ಐವನ್ ಡಿಸೋಜ ಅವರು ಪತ್ರಿಕಾಗೋಷ್ಠಿ ತಿಳಿಸಿದ್ದಾರೆ.

ಸ್ಮಾರ್ಟ್  ಸಿಟಿ ಯೋಜನೆಯ ಮೂಲಕ ಆರಂಭಗೊಂಡ ಕಾಮಗಾರಿಗಳು ಎರಡು ವರ್ಷ ವಾದರೂ ಸಮರ್ಪಕವಾಗಿ ನಡೆದು ಪೂರ್ಣ ಗೊಂಡಿಲ್ಲ. ಈ ಸಂದರ್ಭದಲ್ಲಿ ಮಾಡಲಾದ ವೆಚ್ಚಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕಾಗಿದೆ. ಮನಪಾ ವ್ಯಾಪ್ತಿಗೆ ಬರಬೇಕಾದ ಅನುದಾನ ವನ್ನು ಸ್ಮಾರ್ಟ್ ಸಿಟಿ ಯೋಜನೆಯ ಹೆಸರಿನಲ್ಲಿ ವಿಂಗಡಿಸಿ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕ ಉದ್ದೇಶಗಳಿಗೆ ಬಳಕೆಯಾಗ ಬೇಕಾದ ಸದ್ರಿ ಅನುದಾನದ ಖರ್ಚು, ವೆಚ್ಚಗಳು  ಪಾರದರ್ಶಕವಾಗಿರ ಬೇಕಾಗಿದೆ. ಮೂಡಾ ವ್ಯಾಪ್ತಿಯ ಎಂಟು ಕೆರೆಗಳ ಅಭಿವ್ರದ್ಧಿಗೆ ಎಂಟು ಕೋಟಿ ರೂ. ಮಂಜೂರಾಗಿ ಎಂಟು ತಿಂಗಳು ಕಳೆದರು ಕಾಮಗಾರಿ ಆರಂಭಗೊಂಡಿಲ್ಲ. ಈ ಯೋಜನೆಯ ವೆಚ್ಚಗಳ ಬಗ್ಗೆ ಸರಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿಗೆ ವಿಧಿಸು ವಂತಿಲ್ಲ.ಸರಕಾರದ ಅನುದಾನ ದುರ್ಬಳಕೆಯಾಗುವುದನ್ನು ತಡೆಯಲು ಸದ್ರಿ ಯೋಜನೆಯನ್ನು ಲೋಕಾ ಯುಕ್ತ ತನಿಖೆಗೆ ಒಳಪಡಿಸುವುದು ಸೂಕ್ತ ಎಂದು ಐವನ್‌ ಡಿ ಸೋಜ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಇಂದಿರಾ ಅವಾಝ್ ಯೋಜನೆಯ ಫಲಾನುಭವಿಗಳಿಗೆ ಎರಡು ವರ್ಷ 9 ತಿಂಗಳು ಕಳೆದರೂ ಮನೆ ನಿರ್ಮಿಸಿಕೊಟ್ಟಿಲ್ಲ. ಅಧಿಕಾರಿಗಳು,ಶಾಸಕರೂ ಮುತುರ್ಜಿ ವಹಿಸುತ್ತಿಲ್ಲ.ಇದರಿಂದ ಮನೆ ಮಂಜೂರಾದ ಫಲಾನುಭವಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.ಈ ಬಗ್ಗೆ ಶಾಸಕರು ಮುತುವರ್ಜಿ ವಹಿಸಿ ಫಲಾನುಭವಿಗಳಿಗೆ ಮನೆ ಒದಗಿಸಿಕೊಡಬೇಕೆಂದು ಐವನ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾಜಿ ಮೇಯರ್  ಶಶಿಧರ ಹೆಗ್ಡೆ, ಮಹಾನಗರಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ರವೂಫ್ , ಇತರ ಕಾಂಗ್ರೆಸ್ ಪದಾಧಿಕಾ ರಿಗಳಾದ ನೀರಜ್ ಪಾಲ್, ನಝೀರ್ ಬಜಾಲ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News