ಉತ್ತರ ಪ್ರದೇಶದ ಜೈಲುಗಳಲ್ಲಿದ್ದಾರೆ ಗರಿಷ್ಠ ಸಂಖ್ಯೆಯ ಇಂಜಿನಿಯರ್, ಸ್ನಾತ್ತಕೋತ್ತರ ಪದವೀಧರ ಕೈದಿಗಳು

Update: 2020-10-08 11:20 GMT

ಮೀರತ್ : ಉತ್ತರ ಪ್ರದೇಶದ ಜೈಲುಗಳಲ್ಲಿರುವ ಕೈದಿಗಳ ಪೈಕಿ ಹಲವಾರು ಮಂದಿ ಇಂಜಿನಿಯರಿಂಗ್ ಹಾಗೂ ಸ್ನಾತ್ತಕೋತ್ತರ ಪದವೀಧರರೂ ಇದ್ದಾರೆಂದು ಎನ್‍ಸಿಆರ್‍ಬಿಯ ಕ್ರೈಂ ಇನ್ ಇಂಡಿಯಾ 2019 ವರದಿಯಿಂದ ತಿಳಿದು ಬಂದಿದೆ. ಇತರ ರಾಜ್ಯಗಳಿಗೆ ಹೋಲಿಸಿದಾಗ ಉನ್ನತ ಶಿಕ್ಷಣ ಪಡೆದ ಕೈದಿಗಳ ಸಂಖ್ಯೆ ಉತ್ತರ ಪ್ರದೇಶದಲ್ಲಿ ಗರಿಷ್ಠವಾಗಿದೆ.

ಇಂಜಿನಿಯರಿಂಗ್‍ನಲ್ಲಿ ಪದವಿ ಅಥವಾ ಡಿಪ್ಲೋಮಾ ಹೊಂದಿದ ದೇಶದ 3740 ಕೈದಿಗಳ ಪೈಕಿ 727 ಮಂದಿ ಉತ್ತರ  ಪ್ರದೇಶದ ಜೈಲುಗಳಲ್ಲಿದ್ದರೆ, 495 ಮಂದಿ ಮಹಾರಾಷ್ಟ್ರ ಹಾಗೂ 362 ಮಂದಿ ಕರ್ನಾಟಕದ ಜೈಲುಗಳಲ್ಲಿದ್ದಾರೆ.

ದೇಶದ ಜೈಲುಗಳಲ್ಲಿರುವ 5282 ಸ್ನಾತ್ತಕೋತ್ತರ ಶಿಕ್ಷಣ ಪಡೆದಿರುವ ಕೈದಿಗಳ ಪೈಕಿ ಗರಿಷ್ಠ ಮಂದಿ, ಅಂದರೆ 2010 ಮಂದಿ ಉತ್ತರ ಪ್ರದೇಶದ ಜೈಲುಗಳಲ್ಲಿದ್ದಾರೆ.

ಉತ್ತರ ಪ್ರದೇಶ ಜೈಲುಗಳಲ್ಲಿರುವ ತಾಂತ್ರಿಕ ಪದವಿ ಪಡೆದಿರುವ ಕೈದಿಗಳಲ್ಲಿ ಹಲವರು ಈಗಾಗಲೇ ಅಪರಾಧಿಗಳು ಎಂದು ಘೋಷಿತರಾಗಿದ್ದರೆ ಇನ್ನು ಹಲವರು ವರದಕ್ಷಿಣೆ ಸಾವು ಹಾಗೂ ಅತ್ಯಾಚಾರ ಪ್ರಕರಣಗಳ ಆರೋಪಿಗಳಾಗಿದ್ದಾರೆ. ಇನ್ನು ಕೆಲವರು ಆರ್ಥಿಕ ಅಪರಾಧಗಳಿಗೆ ಜೈಲುಗಳಲ್ಲಿದ್ದಾರೆ ಎಂದು ರಾಜ್ಯದ ಬಂದೀಖಾನೆ ಇಲಾಖೆಯ ಮಹಾನಿರ್ದೇಶಕರಾದ ಆನಂದ್ ಕುಮಾರ್ ಹೇಳುತ್ತಾರೆ.

ಭಾರತದ ಜೈಲುಗಳಲ್ಲಿರುವ ಒಟ್ಟು 3,30,487 ಕೈದಿಗಳ ಪೈಕಿ ಶೇ 1.67ರಷ್ಟು ಮಂದಿ ಸ್ನಾತ್ತಕೋತ್ತರ ಪದವೀಧರರಾಗಿದ್ದರೆ  ಶೇ. 1.2ರಷ್ಟು ಮಂದಿ ಇಂಜಿನಿಯರುಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News