ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ

Update: 2020-10-08 11:42 GMT

ಉಳ್ಳಾಲ : ಕೇಂದ್ರ ಮತ್ತು ರಾಜ್ಯ ಸರಕಾರದ ಜನ ವಿರೋಧಿ ನೀತಿ ಮತ್ತು ಮಹಿಳಾ ದೌರ್ಜ‌್ಯನ್ಯ ನೀತಿಯನ್ನು ವಿರೋಧಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಸಭೆಯು ತೊಕ್ಕೊಟ್ಟು ಬಸ್ಸ್ ನಿಲ್ದಾಣ ಬಳಿ ಗುರುವಾರ ನಡೆಯಿತು.

ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿದ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಹತ್ರಸ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಯುವತಿಗೆ ನ್ಯಾಯ ಕೊಡಲು ಅಸಮರ್ಥರಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರು ಖಾವಿ ಹಾಕಲು ಅಯೋಗ್ಯರು. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದರು.

ದಿನೇಶ್ ರೈ, ಪದ್ಮನಾಭ ನರಿಂಗಾನ, ಶಕುಂತಳಾ ಶೆಟ್ಟಿ, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ದಿನಕರ ಶೆಟ್ಟಿ, ರೋಹಿತ್ ಉಳ್ಳಾಲ ಸುರೇಖಾ ಚಂದ್ರ ಹಾಸ್, ದೇವಕಿ ಉಳ್ಳಾಲ ಮಾತನಾಡಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಅಧ್ಯಕ್ಷತೆಯನ್ನು ವಹಿಸಿದ್ದರು. ಎನ್ ಎಸ್ ಕರೀಂ,ರಹ್ಮಾನ ಕೊಣಾಜೆ,  ಸಿದ್ದೀಕ್ ತಲಪಾಡಿ, ಸದಾಶಿವ ಉಳ್ಳಾಲ್, ಯೂಸುಫ್ ಉಳ್ಳಾಲ, ನಾಸೀರ್ ಸಾಮಣಿಗೆ, ಇಕ್ಬಾಲ್ ಸಾಮಣಿಗೆ, ರವೂಫ್ ಸಿಎಂ,  ದಿನೇಶ್ ಕುಂಪಲ, ನಝರ್ ಪಟ್ಟೋರಿ,  ರಾಕೇಶ್ ಮಲ್ಲಿ, ಆಳ್ವಿನ್ ಡಿಸೋಜ, ಶೋಭಾ ಕೊಣಾಜೆ, ಗುಲಾಬಿ ಕೊಣಾಜೆ ಫಿರೋಝ್, ಅಯ್ಯೂಬ್ ಉಳ್ಳಾಲ, ಮನ್ಸೂರ್ ಉಳ್ಳಾಲ್, ಇಸ್ಮಾಯಿಲ್, ಕಿಶೋರ್ ಗಟ್ಟಿ , ವಿಶ್ವನಾಥ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಮುಸ್ತಫಾ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ರಹ್ಮಾನ್ ಕೊಣಾಜೆ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News