ಶಿರ್ವ ಕಾಲೇಜಿಗೆ ಬಂದ ಅಪರೂಪದ ಅತಿಥಿ

Update: 2020-10-08 14:16 GMT

 ಶಿರ್ವ, ಅ.8: ಇಲ್ಲಿನ ಸ್ಥಳೀಯ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಕಾಲೇಜಿನ ಆವರಣಕ್ಕೆ ಇಂದು ಬೆಳಗ್ಗೆ ಅಪರೂಪದ ಅತಿಥಿಯೊಬ್ಬರ ಆಗಮನವಾಯಿತು.

ಸ್ಥಳೀಯ ಭಾಷೆಯಲ್ಲಿ ಉಡ ಎಂದು ಕರೆಯಲಾಗುವ ಈ ಅಪರೂಪದ ಅತಿಥಿ ಸುಮಾರು ಒಂದು ಮೀ. ಉದ್ದವಿತ್ತು. ದೊಡ್ಡ ಹಲ್ಲಿಯ ಜಾತಿಗೆ ಸೇರಿದ ಈ ಸರೀಸೃಪ ಮಾನವನಿಗೆ ಅದರಲ್ಲೂ ರೈತರಿಗೆ ಉಪಕಾರಿಯಾದ ಪ್ರಾಣಿಯಾಗಿದೆ.

ಈ ಉಡಗಳ ಉಲ್ಲೇಖ ನಮ್ಮ ಇತಿಹಾಸಗಳಲ್ಲಿ ಧಾರಾಳವಾಗಿ ಸಿಗುತ್ತದೆ. ಇದನ್ನು ಕೋಟೆಗಳನ್ನು ಹತ್ತಲು ಬಳಸಲಾಗುತ್ತಿತ್ತು. ಉಡಗಳು ತಾವು ಹಿಡಿದಿರುವುದನ್ನು ಸುಲಭದಲ್ಲಿ ಬಿಡುವುದಿಲ್ಲ ಎಂಬುದೇ ಇವುಗಳ ಬಳಕೆಗೆ ಕಾರಣವಾಗಿತ್ತು.

ಇಂದು ಶಿರ್ವ ಕಾಲೇಜಿಗೆ ಬಂದ ಉಡವನ್ನು ಸುರಕ್ಷಿತವಾಗಿ ಹಿಡಿದು, ಅರಣ್ಯದೊಳಗೆ ಬಿಡಲಾಯಿತು. ಶಿರ್ವ ಕಾಲೇಜು, ಸಾಮಾಜಿಕ ಅರಣ್ಯ ಯೋಜನೆ ಮತ್ತು ಎನ್ನೆಸ್ಸೆಸ್ ಸಹಭಾಗಿತ್ವದಲ್ಲಿ ಬೆಳೆಸಿದ ಕಾಡು ಕಾಲೇಜಿಗೆ ಹಸಿರು ಹೊದಿಕೆಯ ಸೌಂದರ್ಯ ಹಾಗೂ ಶುದ್ಧ ಪರಿಸರವನ್ನು ಒದಗಿಸಿದೆ. ಈ ಕಾಡು ಅನೇಕ ಪ್ರಾಣಿ-ಪಕ್ಷಿಗಳ ಆಶ್ರಯ ತಾಣವೂ ಆಗಿದೆ. ಇಲ್ಲಿ ಕಾಡು ಕೋಳಿ, ನವಿಲು ಮುಂತಾದ ಪ್ರಾಣಿಗಳಿವೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News