×
Ad

ಅ. 9,10: ವಿದ್ಯುತ್ ಸ್ಥಗಿತ

Update: 2020-10-08 20:10 IST

ಮಂಗಳೂರು, ಅ.8: ಕಟೀಲು ಮತ್ತು ಕಿನ್ನಿಗೋಳಿ ಫೀಡರ್‌ನಲ್ಲಿ ದುರಸ್ತಿ ಕಾರ್ಯ ನಡೆಯಲಿರುವುದರಿಂದ ಅ.9ರಂದು ಬೆಳಗ್ಗೆ 10:30ರಿಂದ ಸಂಜೆ 5:30ರವರೆಗೆ ಪದ್ಮನ್ನೂರು, ಕಿನ್ನಿಗೋಳಿ, ಕಿಲೆಂಜೂರು, ಗೋಳಿಜೋರ, ಬಲನಗುಡ್ಡೆ, ಧಾಮಸ್ ಕಟ್ಟೆ, ಉಲ್ಲಂಜೆ, ಮೂರು ಕಾವೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಬಜಪೆ ಮತ್ತು ಪಚ್ಚನಾಡಿ ಫೀಡರ್‌ನಲ್ಲಿ ಕಾಮಗಾರಿ ನಡೆಯಲಿರುವುದರಿಂದ ಅ.10ಂದು ಬೆಳಗ್ಗೆ 9:30ರಿಂದ ಸಂಜೆ 4:30ರವರೆಗೆ ಬೋಂದೆಲ್, ಕೆಪಿಟಿಸಿಎಲ್ ಕಾಲನಿ, ಕೃಷ್ಣನಗರ, ಪಚ್ಚನಾಡಿ, ಅಚ್ಚುಕೋಡಿ, ವಾಮಂಜೂರು, ಮೂಡುಶೆಡ್ಡೆ, ಮಂಗಳಜ್ಯೋತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News