ಹತ್ರಸ್ ಘಟನೆ ಖಂಡಿಸಿ ಕೈಕಂಬ ಜಂಕ್ಷನ್‌ನಲ್ಲಿ ಕಾಂಗ್ರೆಸ್‌ನಿಂದ ಧರಣಿ

Update: 2020-10-08 14:42 GMT

ಗುರುಪುರ, ಅ.8: ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ ಗುರುಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಗುರುಪುರ ಕೈಕಂಬ ಜಂಕ್ಷನ್‌ನಲ್ಲಿ ಧರಣಿ ನಡೆಯಿತು.

ಮಾಜಿ ಶಾಸಕರಾದ ಬಿ.ಎ.ಮೊಯ್ದಿನ್ ಬಾವಾ ಮತ್ತು ಐವನ್ ಡಿಸೋಜ ಮಾತನಾಡಿದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ದಲಿತ ಮುಖಂಡ ಶ್ರೀನಿವಾಸ್, ಕಂದಾವರ ಗ್ರಾಪಂ ಮಾಜಿ ಅಧ್ಯಕ್ಷೆ ವಿಜಯಾ ಜಿ. ಸುವರ್ಣ, ಗಂಜಿಮಠ ಗ್ರಾಪಂ ಮಾಜಿ ಅಧ್ಯಕ್ಷೆ ಮಾಲತಿ, ಕಂದಾವರ ಗ್ರಾಪಂ ಮಾಜಿ ಸದಸ್ಯ ಶಿವಶಂಕರ್, ಇಂಟಕ್‌ನ ಮಂಗಳೂರು ಉತ್ತರ ಕ್ಷೇತ್ರದ ಅಧ್ಯಕ್ಷ ಸಂಪತ್ ಲೋಬೊ, ತಾಪಂ ಸದಸ್ಯರಾದ ಸಚಿನ್ ಅಡಪ, ಸುನಿಲ್ ಜಿ, ಗುರುಪುರ ಗ್ರಾಪಂ ಮಾಜಿ ಅಧ್ಯಕ್ಷೆ ರುಕಿಯಾ, ಮಾಜಿ ಉಪಾಧ್ಯಕ್ಷ ಜಿಎಂ ಉದಯ ಭಟ್, ಗಂಜಿಮಠ ಗ್ರಾಪಂ ಮಾಜಿ ಉಪಾಧ್ಯಕ್ಷ ಜಾಕಿರ್, ಪ್ರಮುಖರಾದ ಪುರುಷೋತ್ತಮ ಮಲ್ಲಿ, ವಿನಯ ಕುಮಾರ್ ಶೆಟ್ಟಿ, ನೂರ್ ಮುಹಮ್ಮದ್, ಟಿ. ಹನೀಫ್, ಯಶವಂತ ಶೆಟ್ಟಿ, ಉಮೈ ಭಾನು, ವಿಮಲಾ, ಸೆಲಿನ್ ಫೆರ್ನಾಂಡಿಸ್, ಗಿರೀಶ್ ಆಳ್ವ, ಜಯಲಕ್ಷ್ಮಿ, ಬೂಬ, ಅಹ್ಮದ್ ಬಾವ, ಎಕೆ ಮುಹಮ್ಮದ್, ಹರೀಶ್ ಭಂಡಾರಿ, ಜಲೀಲ್ ಅಡ್ಡೂರು, ಮುಸ್ತಫ, ಹರಿಯಪ್ಪ ಮುತ್ತೂರು, ಸುನಿಲ್ ಆದ್ಯಪಾಡಿ, ಕೃಷ್ಣಬಂಗೇರ, ವಿನೋಧರ ಪೂಜಾರಿ, ಜೆಸಿಂತಾ ಡಿಕುನ್ಹ ಮತ್ತಿತರರು ಉಪಸ್ಥಿತರಿದ್ದರು.

ಗುರುಪುರ ಬ್ಲಾಕ್‌ನ ಪ್ರಧಾನ ಕಾರ್ಯದರ್ಶಿ ಬಾಷಾ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News