ಜಾರ್ಜ್ ಫ್ಲಾಯ್ಡ್ ಕೊಂದ ಪೊಲೀಸ್ ಅಧಿಕಾರಿಗೆ ಜಾಮೀನು

Update: 2020-10-08 15:06 GMT
ಫೈಲ್ ಚಿತ್ರ

ವಾಶಿಂಗ್ಟನ್, ಅ. 8: ಆಫ್ರಿಕನ್-ಅಮೆರಿಕನ್ ಜಾರ್ಜ್ ಫ್ಲಾಯ್ಡ್ ರನ್ನು ಕೊಂದ ಆರೋಪವನ್ನು ಎದುರಿಸುತ್ತಿರುವ ಪ್ರಧಾನ ಪೊಲೀಸ್ ಅಧಿಕಾರಿಯನ್ನು ಬುಧವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

44 ವರ್ಷದ ಪೊಲೀಸ್ ಅಧಿಕಾರಿ ಶಾವಿನ್‌ಗೆ ಒಂದು ಮಿಲಿಯ ಡಾಲರ್ (ಸುಮಾರು 7.33 ಕೋಟಿ ರೂಪಾಯಿ) ಮೊತ್ತದ ಜಾಮೀನು ನೀಡಲಾಗಿದೆ ಎಂದು ನ್ಯಾಯಾಲಯದ ದಾಖಲೆಗಳು ಹೇಳಿವೆ.

ಫ್ಲಾಯ್ಡ್ ಸಾವಿಗಾಗಿ ಮೂವರು ಪೊಲೀಸರ ವಿರುದ್ಧ ದೋಷಾರೋಪ ಹೊರಿಸಲಾಗಿದೆ.

ಮೇ 25ರಂದು ಫ್ಲಾಯ್ಡ್ ರನ್ನು ಬಂಧಿಸುವ ವೇಳೆ, ಅವರನ್ನು ನೆಲಕ್ಕೆ ಕೆಡವಿದ ಶಾವಿನ್, ಅವರ ಕುತ್ತಿಗೆಯ ಮೇಲೆ ಮೊಣಕಾಲೂರಿ ಹಲವು ನಿಮಿಷಗಳ ಕಾಲ ಕುಳಿತಿದ್ದರು. ಈ ಸಮಯದಲ್ಲಿ ಫ್ಲಾಯ್ಡ್ ವಿಲವಿಲನೆ ಒದ್ಡಾಡಿ ಪ್ರಾಣ ಬಿಟ್ಟಿದ್ದರು.

ಅವರ ಸಾವಿನ ಬೆನ್ನಿಗೇ ಅಮೆರಿಕ ಹಾಗೂ ಜಗತ್ತಿನಾದ್ಯಂತ ಭಾರೀ ಪ್ರತಿಭಟನೆಗಳು ಭುಗಿಲೆದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News