×
Ad

ಮಂಗಳೂರು : ಸಕೀನಾ ನಾಸರ್ ಗೆ ಪಿ.ಎಚ್.ಡಿ ಪದವಿ

Update: 2020-10-08 21:15 IST

ಬಂಟ್ವಾಳ, ಅ. 8: ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಸಕೀನಾ ನಾಸರ್ ಅವರು ಸಲ್ಲಿಸಿರುವ Discrimination and Exclusion: A study on access to Education and Employment of Muslim Women in Karnataka (ತಾರತಮ್ಯ ಮತ್ತು ಬಹಿಷ್ಕರಣ; ಕರ್ನಾಟಕದಲ್ಲಿ ಮುಸ್ಲಿಮ್ ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗ ಲಭ್ಯತೆ) ಕುರಿತ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿದೆ.

ಸಕೀನಾ ನಾಸರ್ ಅವರು ಮಂಗಳೂರಿನ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆ ವಿಭಾಗದ ಪ್ರೊ. ವಿಶ್ವನಾಥ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ.

ಮಂಗಳೂರಿನ ಕುಕ್ಕಾಡಿ ಕುಟುಂಬದವರಾದ ಸಕೀನಾ ನಾಸರ್ ಅವರು ನಾಡೋಜ ಸಾರಾ ಅಬೂಬಕ್ಕರ್ ಅವರ ಪುತ್ರ ಎಂ. ಮುಹಮ್ಮದ್ ನಾಸರ್ ಅವರ ಪತ್ನಿ.  ಈಗ ಅವರು ಮಂಗಳೂರಿನ ಲೇಡಿಹಿಲ್ ನಲ್ಲಿ ವಾಸವಿದ್ದಾರೆ.

ಇವರ ಪುತ್ರಿ ಎಂ. ಫಾತಿಮಾ ನತಾಲಿಯ ಅಮೆರಿಕಾದ ಸನ್ನಿ ವೇಲ್ ನಲ್ಲಿರುವ ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಹಿರಿಯ ಸೋದರ ಅಬ್ದುಲ್ ಖಾದರ್ ಕುಕ್ಕಾಡಿ 1972ರಲ್ಲಿ ಮದ್ರಾಸ್ ನ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಪಡೆದು ಈ ಸಾಧನೆ ಮಾಡಿದ ಪ್ರಪ್ರಥಮ ಬ್ಯಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಇವರ ಇತರ ಸೋದರ, ಸೋದರಿಯರು ಇಂಜಿನಿಯರ್, ವೈದ್ಯರು ಹಾಗು ವಿಜ್ಞಾನಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News