×
Ad

ಬಿಜೆಪಿ ಸರಕಾರದಲ್ಲಿ ರೇಪ್ ರಾಜ್ಯವಾಗುತ್ತಿರುವ ಉತ್ತರ ಪ್ರದೇಶ: ಸೊರಕೆ

Update: 2020-10-08 21:46 IST

ಕಾಪು, ಅ.8: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಮೇಲೆ ಸುಮಾರು 60ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ನಡೆದಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಿರಿಯಡ್ಕದಲ್ಲಿ, ಉತ್ತರ ಪ್ರದೇಶದ ಹತ್ರಸ್ ನಲ್ಲಿ ದಲಿತ ಯುವತಿ ಮನೀಷಾ ವಾಲ್ಮೀಕಿ ಮೇಲೆ ನಡೆದ ಅತ್ಯಾ ಚಾರ ಹಾಗೂ ಹತ್ಯೆಯನ್ನು ವಿರೋಧಿಸಿ ಆಯೋಜಿಸಲಾದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಮನೀಷಾ ಮೇಲಿನ ಅತ್ಯಾಚಾರ ಪ್ರಕರಣವನ್ನು ಯಾವುದೇ ತನಿಖಾ ತಂಡದಿಂದ ತನಿಖೆ ನಡೆಸದೇ ಅದನ್ನು ಮುಚ್ಚಿಹಾಕಲು ಉತ್ತರ ಪ್ರದೇಶ ಸರಕಾರ ನಡೆಸಿರುವ ಪ್ರಯತ್ನವನ್ನು ಅವರು ಖಂಡಿಸಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್, ಹೆಬ್ರಿಯ ನೀರೆ ಕೃಷ್ಣ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿದರು. ಹಿರಿಯಡ್ಕ ಜಯವಂತ್ ರಾವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಚರಣ್ ವಿಠಲ್ ಕುದಿ, ಶಾಂತರಾಮ ಸೂಡ, ತಾಪಂ ಸದಸ್ಯ ಲಕ್ಷ್ಮೀನಾರಾಯಣ ಪ್ರಭು, ಸಂಧ್ಯಾ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ಸೌರಭ್ ಬಲ್ಲಾಳ್, ರವೀಂದ್ರ ಪೂಜಾರಿ, ಉಮೇಶ್ ಕಾಂಚನ್, ಶರತ್ ನಾಯ್ಕಾ, ದೀನೆಶ್ ಶೆಟ್ಟಿ, ಸಂತೋಷ್ ಕುಲಾಲ್, ಗುಣಪಾಲ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News