×
Ad

ಅ.17-18ರಂದು ‘ದಿ ಬಿಗ್ ಬಲಿಪು’ ವರ್ಚುವಲ್ ಮ್ಯಾರಥಾನ್

Update: 2020-10-08 22:46 IST

ಮಂಗಳೂರು, ಅ. 8: ನಗರದ ರೌಂಡ್ ಟೇಬಲ್ ಮತ್ತು ಮಂಗಳೂರು ಲೇಡೀಸ್ ಸರ್ಕಲ್ ವತಿಯಿಂದ ಅಕ್ಟೋಬರ್ 17 ಮತ್ತು 18ರಂದು ‘ದಿ ಬಿಗ್ ಬಲಿಪು’ (ನಡಿಗೆ/ಓಟ) ವರ್ಚುವಲ್ ಮ್ಯಾರಥಾನ್ ಆಯೋಜಿಸಲಾಗಿದೆ.

ಉಡುಪಿ ಮಲ್ಪೆಯ ಕಾರುಣ್ಯ ವಿಶೇಷ ಮಕ್ಕಳ ಶಾಲಾ ಕಟ್ಟಡ ನವೀಕರಣಕ್ಕಾಗಿ ಈ ವಿಶೇಷ ನಡಿಗೆ/ಓಟದ ನೋಂದಣಿಗಾಗಿ ಸಂಗ್ರಹವಾಗುವ ಹಣ ವಿನಿಯೋಗವಾಗಲಿದೆ.

ಕೊರೋನ ಹಿನ್ನೆಲೆಯಲ್ಲಿ ವೆಬ್‌ಸೈಟ್, ಫೇಸ್‌ಬುಕ್ ಅಥವಾ ಇನ್‌ಸ್ಟ್ರಾಗ್ರಾಂ ಮೂಲಕ ನೋಂದಣಿಯಾಗುವ ಆಸಕ್ತರು ತಮ್ಮ ನಡಿಗೆ ಅಥವಾ ಓಟದ ಡೇಟಾವನ್ನು ಮೊಬೈಲ್ ಆ್ಯಪ್‌ನಲ್ಲಿ ಸಂಗ್ರಹಿಸಿಕೊಂಡು ಸ್ಕ್ರೀನ್‌ಶಾಟ್‌ನೊಂದಿಗೆ ಕಳುಹಿಸಬೇಕು. ಅಕ್ಟೋಬರ್ 17ರ ಬೆಳಗ್ಗೆ 5 ಗಂಟೆ ಯಿಂದ ಅ. 18ರಂ ಬೆಳಗ್ಗೆ 11 ಗಂಟೆಯವರೆಗೆ ಯಾವುದೇ ಜಾಗದಲ್ಲಿ ನೋಂದಾಯಿತರು ನಡಿಗೆ ಅಥವಾ ಓಟವನ್ನು ಮಾಡಬಹುದಾಗಿದೆ.

ಈ ದಿ ಬಿಗ್ ಬಲಿಪು ಮ್ಯಾರಥಾನ್‌ನಲ್ಲಿ ಭಾಗವಹಿಸಲು ನೋಂದಾಯಿಸಿದವರು 2 ಕಿ.ಮೀ, 5 ಕಿ.ಮೀ. 10 ಕಿ.ಮೀ. ಅಥವಾ 21 ಕಿ.ಮೀ. ಗಳ ಓಟವನ್ನು ತಿಳಿಸಲಾದ ದಿನದಂದು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಈ ನಡಿಗೆ ಅಥವಾ ಓಟದಲ್ಲಿ ಯುವಕರು, ವಯೋ ವೃದ್ಧರು ಯಾರೂ ಕೂಡಾ ಭಾಗವಹಿಸಬಹುದಾಗಿದೆ. ನೋಂದಣಿಗೆ ಕೊಡುಗೆಯಾಗಿ 499 ರೂ. ಪಾವತಿಸಬೇಕಾಗುತ್ತದೆ. 

Website: www.bigbalipu.com, Facebook: https://www.facebook.com/thebigbalipu/, Instagram: https://www.instagram.com/p/CFbforBhyR7/?igshid=1ptefcj9j87nr

‘‘ನಾವು ಸದುದ್ದೇಶದಿಂದ ಈ ವಿಶೇಷ ಮ್ಯಾರಥಾನ್ ಆಯೋಜಿಸಿದ್ದೇವೆ. ಕೊರೋನ ಕಾರಣದಿಂದಾಗಿ ಇದು ವರ್ಚವಲ್ ಮ್ಯಾರಥಾನ್ ಆಗಿ ನಡೆಯಲಿದೆ. ಸಂಗ್ರಹವಾಗುವ ಹಣವನ್ನು ಕಾರುಣ್ಯ ವಿಶೇಷ ಶಾಲೆಯ ನವೀಕರಣಕ್ಕಾಗಿ ನೀಡಲಾಗುವುದು. ಅಂದಾಜು 12 ಲಕ್ಷ ರೂ. ವೆಚ್ಚದಲ್ಲಿ ಈ ಶಾಲೆ ನವೀಕರಣವಾಗುತ್ತಿದೆ. ಭಾಗವಹಿಸಿ ನೋಂದಣಿ ಸಂದರ್ಭ ತಾವು ಆಯ್ಕೆ ಮಾಡಿಕೊಂಡ ನಡಿಗೆ ಅಥವಾ ಓಟವನ್ನು ಪೂರ್ಣಗೊಳಿಸಿದವರಿಗೆ ಇ ಸರ್ಟಿಫಿಕೇಟ್ ಮತ್ತು ಮೆಡಲ್ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News