ಸಜೀಪನಡು: ಎಸ್ಸೆಸ್ಸೆಫ್, ಎಸ್‌ವೈ‌ಎಸ್ ಕಚೇರಿ 'ತಾಜುಲ್ ಉಲಮಾ ಇಸ್ಲಾಮಿಕ್ ಸೆಂಟರ್' ಉದ್ಘಾಟನೆ

Update: 2020-10-08 17:24 GMT

ಬಂಟ್ವಾಳ: ಎಸ್ಸೆಸ್ಸೆಫ್, ಎಸ್‌ವೈ‌ಎಸ್ ಸಜೀಪ ಶಾಖೆಯ ನೂತನ ಕಚೇರಿ ತಾಜುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಉದ್ಘಾಟನೆ ಹಾಗೂ ಮಹ್‌ಳರತುಲ್ ಬದ್ರಿಯಾ, ಉಸ್ರತುತ್ವಯಿಬ ಕಾರ್ಯಕ್ರಮ ಸಜೀಪನಡು ಜಂಕ್ಷನ್ ಸಮೀಪದ ಅಜ್ಮೀರ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಗುರುವಾರ ಬೆಳಗ್ಗೆ 7 ಗಂಟೆಗೆ ನೂತನ ಕಚೇರಿ "ತಾಜುಲ್ ಉಲಮಾ ಇಸ್ಲಾಮಿಕ್ ಸೆಂಟರ್" ನ್ನು ಸೆಯ್ಯದ್ ಮುಸ್ತಾಕುರ್ರಹ್‌ಮಾನ್ ತಂಗಲ್ ಚಟ್ಟೆಕ್ಕಲ್ ಉಧ್ಘಾಟಿಸಿದರು. ಎಸ್‌ವೈಎಸ್ ಸಜೀಪ ಬ್ರಾಂಚ್ ಸದಸ್ಯ ಹಾಜಿ ಇಸ್ಲಾಯಿಲ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.

ಮಗ್ರಿಬ್ ನಮಾಝ್ ಬಳಿಕ ಮಹ್‌ಳರತುಲ್ ಬದಿಯ್ಯಾ ಮಜ್ಲಿಸ್ ಹಾಗೂ ಉಸ್ರತುತ್ವಯ್ಯಿಬಾ ಕಾರ್ಯಕ್ರಮ ನಡೆಯಿತು. ಎಸ್‌ವೈ‌ಎಸ್ ಸಜೀಪ ಬ್ರಾಂಚ್ ಅಧ್ಯಕ್ಷ ಅಬ್ಬಾಸ್ ಮುಸ್ಲಿಯಾರ್ ಸಜೀಪ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಇಬ್ರಾಹಿಮ್ ಸಖಾಫಿ ಸೆರ್ಕಳ ಕಾರ್ಯಕ್ರಮ ಉದ್ಘಾಟಿಸಿದರು.

ಎಸ್ಸೆಸ್ಸೆಫ್ ವೆಸ್ಟ್ ಝೋನ್ ಉಪಾಧ್ಯಕ್ಷ ಅಕ್ಬರ್ ಅಲಿ ಮದನಿ, ಎಸ್‌ವೈ‌ಎಸ್ ಪಾಣೆಮಂಗಳೂರು ಸೆಂಟರ್ ಕಾರ್ಯದರ್ಶಿ ಕೆ.ಪಿ ಅಬ್ದುಲ್ಲಾ, ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ ಅಧ್ಯಕ್ಷ ಉಸ್ಮಾನ್ ಸಖಾಫಿ, ಎಸ್ಸೆಸ್ಸೆಫ್ ಸಜೀಪ ಶಾಖೆ ಕಾರ್ಯದರ್ಶಿ ನೌಫಲ್ ಹನೀಫಿ ಮಾತನಾಡಿದರು.

ಎಸ್‌ವೈ‌ಎಸ್ ಸಜೀಪ ಬ್ರಾಂಚ್ ಸದಸ್ಯ ಹೈದರ್ ಹಾಜಿ, ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಹಾರಿಸ್ ಚಟ್ಟೆಕ್ಕಲ್, ಎಸ್ಸೆಸ್ಸೆಫ್ ಸಜೀಪ ಶಾಖೆ ಉಸ್ತುವಾರಿ ಬಶೀರ್ ಸಖಾಫಿ ಹಾಗೂ ಎಸ್‌ವೈ‌ಎಸ್, ಎಸ್ಸೆಸ್ಸೆಫ್, ಎಸ್‌ಬಿ‌ಎಸ್ ಕಾರ್ಯಕರ್ತರು ಕಾರ್ಯಕ್ರಮ ದಲ್ಲಿ ಹಾಜರಿದ್ದರು.

ಎಸ್‌ವೈ‌ಎಸ್ ಸಜೀಪ‌ ಬ್ರಾಂಚ್ ಸದಸ್ಯ ಸಿದ್ದೀಕ್ ಸಖಾಫಿ ಸ್ವಾಗತಿಸಿ, ಎಸ್ಸೆಸ್ಸೆಫ್ ಸಜೀಪ ಶಾಖೆ ಕಾರ್ಯದರ್ಶಿ ನೌಫಲ್ ಹನೀಫಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News