×
Ad

ಬ್ಲಡ್ ಡೋನರ್ಸ್‌ ಮಹಿಳಾ ಘಟಕದಿಂದ ಅನ್ನದಾನ

Update: 2020-10-08 22:57 IST

ಮಂಗಳೂರು, ಅ. 8: ಬ್ಲಡ್ ಡೋನರ್ಸ್‌ ಮಂಗಳೂರು ಇದರ 250ನೇ ರಕ್ತದಾನ ಶಿಬಿರವು ದುಬೈಯಲ್ಲಿ ನಡೆಯಲ್ಲಿದೆ. ಇದರ ಪ್ರಚಾರರ್ಥ ಬ್ಲಡ್ ಡೋನರ್ಸ್‌ ಮಂಗಳೂರು ಇದರ ಮಹಿಳಾ ಘಟಕದ ವತಿಯಿಂದ ಬೆಳ್ಮ ಗ್ರಾಮದ ಸೇವಾಶ್ರಾಮ ಮತ್ತು ಮಂಗಳೂರಿನ ಬಿಜೈಯ ಸೇಹ್ನದೀಪಾದ ನಿವಾಸಿಗಳಿಗೆ ಮಧ್ಯಾಹ್ನ ಊಟ ವಿತರಿಸಲಾಯಿತು.

ಈ ಸಂದರ್ಭ ಎಚ್‌ಐವಿ ಏಡ್ಸ್ ಪೀಡಿತ ಮಕ್ಕಳನ್ನು ಸಲಹುವ ಸ್ನೇಹದೀಪ ಸಂಸ್ಥೆಯ ಸ್ಥಾಪಕಿ ತಬಸ್ಸುಮ್ ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ಘಟಕದ ಅಧ್ಯಕ್ಷೆ ಅಯಿಶಾ ಯು.ಕೆ., ಪ್ರಧಾನ ಕಾರ್ಯದರ್ಶಿ ಶಬಾಬ್, ಜೊತೆ ಕಾರ್ಯದರ್ಶಿ ಭಾರತಿ ಪ್ರಶಾಂತ್, ಜುಬೈರಿಯಾ ಮುಫೀದಾ, ಅಯಿಶಾ ಫರ್ಝಾನ್, ಶಹನಾಝ್ ಉಳ್ಳಾಲ್, ನಸೀಬಾ ಪುತ್ತೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News