ಅ. 10 : ಉಡುಪಿ ಖಾಝಿ ಸ್ವೀಕಾರ ಸಮಾರಂಭ, ಅನುಸ್ಮರಣಾ ಮಜ್ಲಿಸ್
ಕಾಪು : ಕರ್ನಾಟಕ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದರ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ನ ನೂತನ ಖಾಝಿಯ ಸ್ವೀಕಾರ ಸಮಾರಂಭ ಹಾಗೂ ಬೇಕಲ ಉಸ್ತಾದ್ ರವರ ಅನುಸ್ಮರಣಾ ಮಜ್ಲಿಸ್ ಶನಿವಾರ ಕೇಂದ್ರ ಜುಮಾ ಮಸೀದಿ ಮೂಳೂರಿನಲ್ಲಿ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹಾಜಿ ಪಿ ಅಬೂಬಕ್ಕರ್ ನೇಜಾರ್ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಅಸ್ಸಯ್ಯಿದ್ ಜಾಪರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ರವರ ದುಅದೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮವನ್ನು ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ಅಧ್ಯಾಪಕ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ ಮುಹಮ್ಮದ್ ಪಾಝಿಲ್ ರಿಝ್ವಿ ಕಾವಳಕಟ್ಟೆ ಹಝ್ರತ್ ಉದ್ಘಾಟಿಸಲಿರುವರು. ಖಾಝಿ ಪದಗ್ರಹಣ ನೇತೃತ್ವವನ್ನು ಕರ್ನಾಟಕ ಉಲಮಾ ಒಕ್ಕೂಟದ ಕೋಶಾಧಿಕಾರಿ, ಕೊಡಗು ಜಿಲ್ಲಾ ಸಹಾಯಕ ಖಾಝಿ ಎಡಪ್ಪಾಲ ಮಹ್ಮೂದ್ ಮುಸ್ಲಿಯಾರ್ ನಿರ್ವಹಿಸಲಿದ್ದಾರೆ.
ಕರ್ನಾಟಕ ಉಲಮಾ ಒಕ್ಕೂಟದ ಉಪಾಧ್ಯಕ್ಷರಾದ ಕೆ ಪಿ ಹುಸೈನ್ ಸಅದಿ ಕೆ.ಸಿ. ರೋಡ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕರ್ನಾಟಕ ಸುನ್ನೀ ಕೋರ್ಡಿನೇಶನ್ ಅಧ್ಯಕ್ಷರಾದ ಎಸ್. ಪಿ ಹಂಝ ಸಖಾಫಿ ಬಂಟ್ವಾಳ, ಕಾರ್ಯದರ್ಶಿ ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು ಎಸ್ ವೈ ಎಸ್ ರಾಜ್ಯಾಧ್ಯಕ್ಷರಾದ ಉಸ್ಮಾನ್ ಸಅದಿ ಪಟ್ಟೋರಿ, ಎಸ್ಸೆಸ್ಸೆಪ್ ರಾಜ್ಯಾಧ್ಯಕ್ಷರಾದ ಅಸ್ಸಯ್ಯಿದ್ ಉಮರ್ ಅಸ್ಸಖಾಪ್ ಮದನಿ ತಂಙಳ್ , ಎಸ್ ಎಮ್ ಎ ರಾಜ್ಯಾಧ್ಯಕ್ಷರಾದ ಅಸ್ಸಯ್ಯಿದ್ ಜಲಾಲುದ್ದೀನ್ ಅಲ್ ಹಾದಿ ತಂಙಳ್ ಮಲ್ಜ್‍ಅ, ಎಸ್ ಜೆ ಎಮ್ ರಾಜ್ಯಾಧ್ಯಕ್ಷರಾದ ಆತೂರು ಸಅದ್ ಮುಸ್ಲಿಯಾರ್, ಎಸ್ ಇ ಡಿಸಿ ರಾಜ್ಯಾಧ್ಯಕ್ಷರಾದ ಕೆ.ಕೆ.ಎಂ ಮುಹ್ಯದ್ದೀನ್ ಕಾಮಿಲ್ ಸಖಾಫಿ, ಕೆಸಿಎಫ್ ಐಎನ್ ಸಿ ಅಧ್ಯಕ್ಷರಾದ ಹಾಜಿ ಶೈಖ್ ಬಾವ, ಡಿಕೆಎಸ್ ಸಿ ನಾಯಕರಾದ ಹಾಜಿ ಇಸ್ಮಾಯಿಲ್ ಕಿನ್ಯ ಎಸ್ ಡಿ ಐ ರಾಜ್ಯ ಮುಬಲ್ಲಿಗ್ ಮೌಲಾನಾ ಸಾದಿಖುಲ್ಲಾ ರಝ್ವಿ,ಬೇಕಲ್ ಉಸ್ತಾದರ ಸುಪುತ್ರ ಅಬ್ದುಲ್ ಜಲೀಲ್ ಮೋಂಟುಗೋಳಿ ಹಾಗೂ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರೂ, ರಾಜ್ಯದ ವಿವಿಧ ಸುನ್ನೀ ಸಂಘಟನೆಗಳ ಪ್ರಮುಖರೂ ಹಾಗೂ ಮತ್ತಿತರ ನಾಯಕರು ಭಾಗವಹಿಸುವರು.